ಅತೀಜಮ್ಮ
Update: 2026-03-04 21:20 IST
ಮುಲ್ಕಿ: ಇಲ್ಲಿನ ಕೆ.ಎಸ್. ರಾವ್ ನಗರ ನಿವಾಸಿ ಮರ್ಹೂಮ್ ಬಿ.ಎಂ. ಹಾಜಿ ಚಾಬಾ ಅವರ ಪತ್ನಿ ಅತೀಜಮ್ಮ ಅವರು ಬುಧವಾರ ಸಂಜೆ ಹೃದಯಾಘಾತಕ್ಕೊಳಗಾಗಿ ನಿಧನರಾದರು.
ಸಂಜೆಯ ವೇಳೆ ಇವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರನ್ನು ಆ್ಯಂಬುಲೆನ್ಸ್ ಮೂಲಕ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಇವರು ಮುಲ್ಕಿ ನಗರ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಮುಲ್ಕಿ ಕೊಲ್ನಾಡು ಶಾಫಿ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯ ಬಿ.ಎಂ. ಆಸಿಫ್ ಸೇರಿದಂತೆ ಮೂವರು ಪುತ್ರರು ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯವು ಗುರುವಾರ ಬೆಳಗ್ಗೆ ಕೊಲ್ನಾಡು ಶಾಫಿ ಜುಮಾ ಮಸೀದಿಯ ಖಬರಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.