ನೆಟ್ಲಮುಡ್ನೂರು : ಉಮ್ರಾ ಯಾತ್ರಿ ಇಬ್ರಾಹಿಂ ನಿಧನ
Update: 2026-02-10 08:43 IST
ಬಂಟ್ವಾಳ : ಪವಿತ್ರ ಉಮ್ರಾ ಯಾತ್ರೆಗೆ ತೆರಳಿದ್ದ ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ನಿವಾಸಿ ಇಬ್ರಾಹಿಂ (65) ಅವರು ಹೃದಯಾಘಾತದಿಂದ ಸೋಮವಾರ ರಾತ್ರಿ ಮಕ್ಕಾದಲ್ಲಿ ಮೃತಪಟ್ಟರು.
ಫೆ.01ರಂದು ಪತ್ನಿ ಹಾಗೂ ಕುಟುಂಬಿಕರೊಂದಿಗೆ ಉಮ್ರಾ ಯಾತ್ರೆಗೆ ತೆರಳಿದ್ದ ಅವರು ತನ್ನ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು ತುಸು ಹೊತ್ತಿನಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.