ಅಬ್ದುಲ್ ಖಾದರ್ ಅಜ್ಜಿನಡ್ಕ
Update: 2026-03-08 19:53 IST
ಕೋಟೆಕಾರ್, ಮಾ.8: ಹಲವು ವರ್ಷಗಳ ಕಾಲ ಗಲ್ಫ್‌ನಲ್ಲಿ ಉದ್ಯೋಗದಲ್ಲಿದ್ದ ಅಜ್ಜಿನಡ್ಕ ನಿವಾಸಿ ಟಿ.ಎ. ಅಬ್ದುಲ್ ಖಾದರ್(63) ಅಲ್ಪಕಾಲದ ಅನಾರೋಗ್ಯದಿಂದ ಅಜ್ಜಿನಡ್ಕದ ಮನೆಯಲ್ಲಿ ಶನಿವಾರ ರಾತ್ರಿ ನಿಧನರಾದರು.
ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಹಾಗೂ ಅಪಾರ ಬಂಧುಬಳಗದವರನ್ನು ಮೃತರು ಅಗಲಿದ್ದಾರೆ.
ಬದ್ರಿಯಾ ಜಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿ, ಬದ್ರಿಯಾ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾಗಿ, ಅಜ್ಜಿನಡ್ಕ ಸರಕಾರಿ ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದ ಅಬ್ದುಲ್ ಖಾದರ್, ಪ್ರಸಕ್ತ ಗಲ್ಫ್ ಫ್ರೆಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
*ಇವರ ನಿಧನಕ್ಕೆ ಬದ್ರಿಯಾ ವೆಲ್ಫೇರ್ ಸೊಸೈಟಿ, ಗಲ್ಫ್ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ ಸಂತಾಪ ವ್ಯಕ್ತಪಡಿಸಿದೆ.