×
Ad

ಅಮೆರಿಕ ಗಡಿಯಲ್ಲಿ ಅಕ್ರಮ ಭಾರತೀಯ ನುಸುಳುಕೋರರ ಬಂಧನ ಗಣನೀಯ ಇಳಿಕೆ

Update: 2025-07-02 07:45 IST

ಸಾಂದರ್ಭಿಕ ಚಿತ್ರ PC: gettyimages

ಅಹ್ಮದಾಬಾದ್: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಮತ್ತು ಟ್ರಂಪ್ ಅವರ ಹೊಸ ವಲಸೆ ನೀತಿಯ ಹಿನ್ನೆಲೆಯಲ್ಲಿ ಅಮೆರಿಕ ಗಡಿಯಲ್ಲಿ ಅಕ್ರಮವಾಗಿ ನುಸುಳುವ ವೇಳೆ ಬಂಧನಕ್ಕೊಳಗಾಗುವ ಭಾರತೀಯರ ಸಂಖ್ಯೆ ಈ ವರ್ಷದ ಮೊದಲ ಐದು ತಿಂಗಳಲ್ಲಿ ಶೇಕಡ 70ರಷ್ಟು ಕಡಿಮೆಯಾಗಿದೆ.

ಜೋ ಬೈಡೇನ್ ಅವರು ಅಧಿಕಾರದಲ್ಲಿದ್ದ 2024ರ ಜನವರಿಯಿಂದ ಮೇ ತಿಂಗಳ ಅವಧಿಯಲ್ಲಿ 34,535 ಅಕ್ರಮ ನುಸುಳುಕೊರರನ್ನು ಬಂಧಿಸಿದ್ದರೆ, 2025ರ ಇದೇ ಅವಧಿಯಲ್ಲಿ ಬಂಧಿತ ಭಾರತೀಯರ ಸಮಖ್ಯೆ 10382. ಇಷ್ಟಾಗಿಯೂ ಅಮೆರಿಕದ ಕನಸು ಹೊತ್ತು ತನ್ನ ಜೀವವನ್ನೇ ಪಣಕ್ಕಿಟ್ಟು ಅಪಾಯಕಾರಿ ಮಾರ್ಗದ ಮೂಲಕ ಗಡಿ ನುಸುಳಲು ಮುಂದಾಗಿರುವುದು ಅಚ್ಚರಿಯ ಸಂಗತಿ. ಇದರಲ್ಲಿ ಪೋಷಕರಿಲ್ಲದ 30 ಮಂದಿ ಅಪ್ರಾಪ್ತ ವಯಸ್ಕರು ಕೂಡಾ ಸೇರಿದ್ದಾರೆ. ಬಂಧಿತರಲ್ಲಿ ಬಹುತೇಕ ಮಂದಿ ಗುಜರಾತ್ ಮೂಲದವರು. ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ವಿಭಾಗ ಈ ಅಂಕಿ ಅಂಶ ಬಿಡುಗಡೆ ಮಾಡಿದೆ.

ಅಕ್ರಮ ವಲಸೆ ವಿರುದ್ಧ ಟ್ರಂಪ್ ಆಡಳಿತ ಕೈಗೊಂಡಿರುವ ಕಟ್ಟುನಿಟ್ಟಿನ ನೀತಿಯ ಹಿನ್ನೆಲೆಯಲ್ಲಿ ಈ ಗಣನೀಯ ಕುಸಿತ ಕಂಡುಬಂದಿದೆ ಎನ್ನಲಾಗಿದೆ. ಗುಜರಾತ್ನಿಂದ ಅಕ್ರಮವಾಗಿ ವಲಸೆ ಬರುವವರಿಗೆ ನೆರವಾಗುತ್ತಿದ್ದ ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ಇದರಿಂದ ಭಾರಿ ಹೊಡೆತ ಬಿದ್ದಿದೆ.

ಗಡಿಯಲ್ಲಿ ನಡೆಯುವ ಎನ್ಕೌಂಟರ್ ಪ್ರಮಾಣ ಕೂಡಾ ಕಡಿಮೆಯಗಿದ್ದು, ಪ್ರತಿದಿನ ಬಂಧಿತರಾಗುವ ಭಾರತೀಯರ ಸಂಖ್ಯೆ 230 ರಿಂದ 69ಕ್ಕೆ ಇಳಿದಿದೆ. ಟ್ರಂಪ್ ಪುನರಾಗಮನದ ನಿರೀಕ್ಷೆಯಲ್ಲಿ 2024ರ ಕೊನೆ ವೇಳೆಗೆ ಇಂಥ ಬಹಳಷ್ಟು ಜಾಲಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News