×
Ad

ರಮಝಾನ್ ಸಹರಿಗೆ ಸೂಕ್ತವಾದ 5 ಪೌಷ್ಠಿಕಾಂಶದ ಓಟ್ಸ್-ಆಧಾರಿತ ʼಸಹರಿ ಸ್ಮೂಥಿಗಳುʼ

Update: 2026-03-10 15:25 IST

ಸಾಂದರ್ಭಿಕ ಚಿತ್ರ (Image by freepik)

ಫೈಬರ್, ಪ್ರೊಟೀನ್ ಮತ್ತು ಸ್ಥಿರವಾದ ಶಕ್ತಿಯ ಆಗರಗಳಾಗಿರುವ ಓಟ್ಸ್ನಿಂದ ತಯಾರಿಸಿದ ಸ್ಮೂಥಿಗಳು ಸಹರಿಗೆ ಅತ್ಯುತ್ತಮ ಆಯ್ಕೆಯಾಗಿರುತ್ತವೆ.

ಉಪವಾಸದ ದಿನವಿಡೀ ಶಕ್ತಿಯನ್ನು ಉಳಿಸಿಕೊಳ್ಳಲು ರಮಝಾನ್ ಸಮಯದಲ್ಲಿ ಬೆಳಗಿನ ಜಾವದ ಊಟವಾದ ಸಹರಿ ಅತಿ ಅಗತ್ಯ ಆಹಾರ. ಓಟ್ಸ್ನಿಂದ ತಯಾರಿಸಿದ ಸ್ಮೂಥಿಗಳು ಸಹರಿಗೆ ಅತ್ಯುತ್ತಮ ಆಯ್ಕೆಯಾಗಿರುತ್ತದೆ. ಏಕೆಂದರೆ ಅವುಗಳು ಫೈಬರ್, ಪ್ರೊಟೀನ್ ಮತ್ತು ಸ್ಥಿರವಾದ ಶಕ್ತಿಯ ಬಿಡುಗಡೆಯನ್ನು ಒದಗಿಸುತ್ತವೆ. ಬೀಟಾ-ಗ್ಲುಕಾನ್ನಲ್ಲಿ ಸಮೃದ್ಧವಾಗಿರುವ ಓಟ್ಸ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಪೂರ್ಣತೆ ಕಾಪಾಡಿಕೊಳ್ಳಲು ನೆರವಾಗುತ್ತದೆ. ಜೊತೆಗೆ ಹಣ್ಣುಗಳು, ಕಡಲೆಗಳು ಮತ್ತು ಬೀಜಗಳು ನೈಸರ್ಗಿಕ ಸಿಹಿಯನ್ನು, ವಿಟಮಿನ್ಗಳನ್ನು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒದಗಿಸುತ್ತವೆ. ಈ ಸಂಯೋಜನೆಗಳು ಸಹರಿಯನ್ನು ಪೌಷ್ಠಿಕ ಆಹಾರವಾಗಿಸುತ್ತದೆ ಮತ್ತು ಸೇವಿಸಲು ಅನುಕೂಲಕರವಾಗಿರುತ್ತದೆ.

ಓಟ್ಸ್ ಸಹರಿಗೆ ಅನುಕೂಲಕರವೇಕೆ?

ಸಹರಿಗೆ ಓಟ್ಸ್ ಶಕ್ತಿಶಾಲಿ ಆಹಾರ ಪದಾರ್ಥ. ಓಟ್ಸ್ನ ಕರಗುವ ಫೈಬರ್ ನಿಧಾನವಾಗಿ ಶಕ್ತಿಯ ಬಿಡುಗಡೆಗೆ ಬೆಂಬಲಿಸುತ್ತದೆ. ಹೀಗಾಗಿ ಉಪವಾಸದ ಸಮಯದಲ್ಲಿ ದೇಹವನ್ನು ಸಕ್ರಿಯವಾಗಿಡುತ್ತದೆ. ಓಟ್ಸ್ಗಳು ಸಸ್ಯ ಆಧಾರಿತ ಪ್ರೊಟೀನ್, ಕಬ್ಬಿಣ ಮತ್ತು ಮೆಗ್ನೇಸಿಯಂಗಳನ್ನು ಒದಗಿಸುವ ಮೂಲಕ ಸಮತೋಲಿತ ಪೋಷಣೆಗೆ ಕೊಡುಗೆ ನೀಡುತ್ತವೆ. ಹಣ್ಣುಗಳು, ಹಾಲು ಮತ್ತು ಬೀಜಗಳೊಂದಿಗೆ ಬೆರೆಸಿದಾಗ ಓಟ್ಸ್ ಕೆನೆಭರಿತ ರುಚಿಯನ್ನು ಸೃಷ್ಟಿಸುತ್ತದೆ ಮತ್ತು ಹೊಟ್ಟೆ ತುಂಬಿಸುವ ಭಾವನೆ ನೀಡಿ ತೃಪ್ತಿಕರವಾಗಿಸುತ್ತದೆ.

ಬಾಳೆಹಣ್ಣು ಓಟ್ ನ ಶಕ್ತಿಯುತ ಸ್ಮೂಥಿ

ಈ ಸ್ಮೂಥಿಯನ್ನು ತಯಾರಿಸುವುದು ಸರಳ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಹೀಗಾಗಿ ಸಹರಿಗೆ ಅತ್ಯುತ್ತಮ.

ಬಳಸುವ ಪದಾರ್ಥಗಳು: ರೋಲ್ಡ್ ಓಟ್ಸ್, ಬಾಳೆಹಣ್ಣು, ಹಾಲು/ಬಾದಾಮಿ ಹಾಲು, ಪೀನಟ್ ಬಟರ್, ಚಿಯಾ ಬೀಜಗಳು, ದಾಲ್ಚಿನ್ನಿ.

ಲಾಭಗಳು: ಫೈಬರ್, ಪ್ರೊಟೀನ್ ಮತ್ತು ನೈಸರ್ಗಿಕವಾದ ಕಾರ್ಬೋಹೈಡ್ರೇಟ್ಗಳನ್ನು ಸುಸ್ಥಿರ ಶಕ್ತಿಗಾಗಿ ಒದಗಿಸುತ್ತವೆ.


ಖರ್ಜೂರ ಬಾದಾಮಿ ಓಟ್ ಸ್ಮೂಥಿ

ಬಳಸುವ ಪದಾರ್ಥಗಳು: ರೋಲ್ಡ್ ಓಟ್ಸ್, ಮೃದುವಾದ ಖರ್ಜೂರ, ಹಾಲು/ಬಾದಾಮಿ ಹಾಲು, ತುಂಡರಿಸಿದ ಬಾದಾಮಿಗಳು, ಚಿಯಾ ಬೀಜಗಳು, ಏಲಕ್ಕಿ.

ಲಾಭಗಳು: ತ್ವರಿತವಾಗಿ ಬಿಡುಗಡೆಯಾಗುವ ಕಾರ್ಬೋಹೈಡ್ರೇಟ್ಗಳನ್ನು ನಿಧಾನವಾಗಿ ಜೀರ್ಣಗೊಳ್ಳುವ ಫೈಬರ್ನೊಂದಿಗೆ ಸಂಯೋಜಿಸುವ ಮೂಲಕ ಸಮತೋಲಿತ ಪೋಷಣೆ ಒದಗಿಸುತ್ತದೆ.


ಸೇಬು, ದಾಲ್ಚಿನ್ನಿ ಓಟ್ ಸ್ಮೂಥಿ

ತಾಜಾ ಮತ್ತು ರುಚಿಕರವಾಗಿರುತ್ತದೆ. ಸೇಬು ತುಂಡುಗಳನ್ನು ಓಟ್ಸ್ ಮತ್ತು ವಾಲ್ನಟ್ ಜೊತೆಗೆ ಸಂಯೋಜಿಸುತ್ತದೆ.

ಬಳಸುವ ಪದಾರ್ಥಗಳು: ರೋಲ್ಡ್ ಓಟ್ಸ್, ಸೇಬು ತುಂಡುಗಳು, ಹಾಲು/ಬಾದಾಮಿ ಹಾಲು, ವಾಲ್ನಟ್ಗಳು, ಚಿಯಾ ಬೀಜಗಳು, ದಾಲ್ಚಿನ್ನಿ.

ಲಾಭಗಳು: ಸೇಬುಗಳು ಮತ್ತು ವಿಟಮಿನ್ಗಳು ಮತ್ತು ನೈಸರ್ಗಿಕವಾದ ಸಿಹಿಗಳು ಜೊತೆಗೂಡಿರುತ್ತವೆ. ಓಟ್ಸ್ ಉಪವಾಸದ ಸಂದರ್ಭದಲ್ಲಿ ಹೊಟ್ಟೆ ತುಂಬಿರುವ ಅನುಭವ ಕೊಡುತ್ತದೆ.


ಮಾವು, ತೆಂಗಿನ ಹಾಲು ಓಟ್ ಸ್ಮೂಥಿ

ಸಹರಿಗೆ ತೆಂಗಿನ ಹಾಲಿನ ಟ್ವಿಸ್ಟ್ ಕೊಡುವುದು. ಮಾವು ಮತ್ತು ತೆಂಗಿನ ಹಾಲು ಜೊತೆಗೆ ಓಟ್ಸ್ ಬೆರೆಸಿದ ಸ್ಮೂಥಿ ಸಿದ್ಧಪಡಿಸುವುದು.

ಬಳಸುವ ಪದಾರ್ಥಗಳು: ರೋಲ್ಡ್ ಓಟ್ಸ್, ಮಾವಿನ ಹಣ್ಣಿನ ತುಂಡುಗಳು, ತೆಂಗಿನ ಹಾಲು, ತುರಿದ ತೆಂಗು, ಚಿಯಾ ಬೀಜಗಳು, ಏಲಕ್ಕಿ.

ಲಾಭಗಳು: ಮಾವು ವಿಟಮಿನ್ಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಒದಗಿಸುತ್ತದೆ. ತೆಂಗು ಆರೋಗ್ಯಕರ ಕೊಬ್ಬು ಮತ್ತು ರುಚಿಯನ್ನು ಒದಗಿಸುತ್ತದೆ.


ಬೆರ್ರಿ ಯೋಗರ್ಟ್ ಓಟ್ ಸ್ಮೂಥಿ

ಈ ಸ್ಮೂಥಿ ಓಟ್ಸ್ ಅನ್ನು ಯೋಗಾರ್ಟ್ (ಮೊಸರು) ಜೊತೆಗೆ ಸಂಯೋಜಿಸುತ್ತದೆ ಮತ್ತು ಬೆರ್ರಿಗಳು ಪ್ರೊಟೀನ್ ಸಮೃದ್ಧ ಆಯ್ಕೆಯಾಗಿರುತ್ತವೆ.

ಬಳಸುವ ಪದಾರ್ಥಗಳು: ರೋಲ್ಡ್ ಓಟ್ಸ್, ಯೋಗಾರ್ಟ್, ಹಾಲು, ಮಿಶ್ರ ಮಾಡಿದ ಬೆರ್ರಿಗಳು, ಚಿಯಾ ಬೀಜಗಳು ಮತ್ತು ಕತ್ತರಿಸಿದ ಬಾದಾಮಿಗಳು.

ಲಾಭಗಳು: ಯೋಗಾರ್ಟ್ ಜೀರ್ಣಕ್ರಿಯೆಗಾಗಿ ಪ್ರೊಟೀನ್ ಮತ್ತು ಪ್ರೊಬಯಾಟಿಕ್ಸ್ ಅನ್ನು ಸೇರಿಸುತ್ತದೆ, ಬೆರ್ರಿಗಳು ಆಂಟಿ-ಆಕ್ಸಿಡಂಟ್ಗಳನ್ನು ಸರಬರಾಜು ಮಾಡುತ್ತವೆ.

ರಮಝಾನ್ ಸಮಯದಲ್ಲಿ ಸಹರಿಗೆ ಓಟ್ ಆಧಾರಿತ ಸ್ಮೂಥಿಗಳು ಪ್ರಾಯೋಗಿಕ ಮತ್ತು ಪೌಷ್ಠಿಕಾಂಶದ ಆಯ್ಕೆಯಾಗಿದೆ. ಫೈಬರ್, ಪ್ರೊಟೀನ್ ಮತ್ತು ನೈಸರ್ಗಿಕ ಕಾರ್ಬೋಹೈಡ್ರೇಟ್ಗಳು ಉಪವಾಸದ ಸಮಯದುದ್ದಕ್ಕೂ ತೃಪ್ತಿ ಮತ್ತು ಶಕ್ತಿಯನ್ನು ಕಾಪಿಟ್ಟುಕೊಳ್ಳಲು ನೆರವಾಗುತ್ತವೆ. ಬಾಳೆಹಣ್ಣು, ಖರ್ಜೂರ, ಸೇಬುಗಳು, ಮಾವುಗಳು ಅಥವಾ ಬೆರ್ರಿಗಳ ಜೊತೆಗೆ ಸಂಯೋಜಿಸಿದಾಗ ಸ್ಮೂಥಿಗಳು ಸರಳ, ಹೊಟ್ಟೆ ತುಂಬಿಸಿದ ಭಾವನೆ ನೀಡಿ ಶಕ್ತಿಯನ್ನೂ ಕೊಡುವಂತೆ ಸೆಹ್ರಿಯನ್ನು ಬದಲಿಸುತ್ತವೆ.

ಕೃಪೆ: hindustantimes.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News