×
Ad

ದೋಹಾದಲ್ಲಿ ಬ್ಯಾರಿ ಉದ್ಯಮಿಗಳ ಶೃಂಗಸಭೆ: ಬಿಸಿಸಿಐ ಖತರ್ ಚಾಪ್ಟರ್ ಉದ್ಘಾಟನೆ

Update: 2025-11-15 13:06 IST

ಖತರ್: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಖತರ್ ಚಾಪ್ಟರ್ ಉದ್ಘಾಟನೆ ಹಾಗೂ ಖತರ್ ನಲ್ಲಿರುವ ಬ್ಯಾರಿ ಸಮುದಾಯದ ವತಿಯಿಂದ 'ಬ್ಯಾರೀಸ್ ಉದ್ಯಮಿಗಳ ಶೃಂಗಸಭೆ- 2025' ಇತ್ತೀಚೆಗೆ ದೋಹಾದ ಪ್ರತಿಷ್ಠಿತ ಸ್ಟೀಗೆನ್ ಬರ್ಗರ್ ಹೋಟೆಲ್ನಲ್ಲಿ ಜರುಗಿತು.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಬಿಸಿಸಿಐ ಖತರ್ ಚಾಪ್ಟರ್ ನ ಔಪಚಾರಿಕ ಉದ್ಘಾಟನೆ ನೆರವೇರಿಸಿದರು.

ಬಳಿಕ ಮಾತನಾಡಿದ ಯು.ಟಿ.ಖಾದರ್, ಗಡಿಗಳನ್ನು ಮೀರಿ ಉದ್ಯಮಶೀಲತೆ, ಏಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿದ್ದಕ್ಕಾಗಿ ಬ್ಯಾರಿ ಸಮುದಾಯವನ್ನು ಶ್ಲಾಘಿಸಿದರು.

 

ಮುಖ್ಯ ಭಾಷಣ ಮಾಡಿದ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್, ಬ್ಯಾರೀಸ್ ಉದ್ಯಮಿಗಳನ್ನು ಜಾಗತಿಕವಾಗಿ ಸಂಪರ್ಕಿಸುವ, ಸಬಲೀಕರಣಗೊಳಿಸುವ ಮತ್ತು ಉತ್ತೇಜಿಸುವ ಬಿಸಿಸಿಐನ ಧ್ಯೇಯವನ್ನು ವಿವರಿಸಿದರು.

ಬಿಸಿಸಿಐ ಅಧ್ಯಕ್ಷ ಎಸ್.ಎಂ.ಆರ್.ರಶೀದ್ ಮಾತನಾಡಿ, ಬಿಸಿಸಿಐ ಪ್ರಧಾನ ಕಚೇರಿಯನ್ನು ಸ್ಥಾಪಿಸುವ ಪ್ರಾಮುಖ್ಯತೆಯನ್ನು ವಿವರಿಸಿದರು.

ಬಿಸಿಸಿಐ ದುಬೈ ಚಾಪ್ಟರ್ ಅಧ್ಯಕ್ಷ ಹಿದಾಯತ್, ಸೌದಿ ಚಾಪ್ಟರ್ ಅಧ್ಯಕ್ಷ ಝಕರಿಯಾ ಜೋಕಟ್ಟೆ, ಅಲೈಡ್ ಆಂಡ್ ಹೆಲ್ತ್ಕೇರ್ ಕೌನ್ಸಿಲ್ ಕರ್ನಾಟಕ ರಾಜ್ಯಾಧ್ಯಕ್ಷ ಅಧ್ಯಕ್ಷ ಡಾ.ಇಫ್ತಿಕಾರ್ ಅಲಿ ಮತ್ತಿತರ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ಇಬ್ರಾಹಿಂ ಕರೀಂ ಗಡಿಯಾರ, ಮುಹಮ್ಮದ್ ಅಲಿ ಉಚ್ಚಿಲ್, ಮುಹಮ್ಮದ್ ಸಲೀಂ ಮೂಡುಬಿದಿರೆ, ಮುಸ್ತಾಕ್ ಕದ್ರಿ, ಅಶ್ರಫ್ ಕರ್ನಿರೆ ಮತ್ತು ಬಶೀರ್, ಮನ್ಸೂರ್ ಅಹ್ಮದ್ ಆಝಾದ್, ಮುಹಮ್ಮದ್ ಇಮ್ತಿಯಾಝ್ ಕಂದಕ್, ಅಬ್ದುಲ್ ರವೂಫ್ ಸುಲ್ತಾನ್, ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಅಬ್ದುಲ್ ರಝಾಕ್ ಗೋಳ್ತಮಜಲು, ಸೂಫಿಖಾನ್ ಕಲಂದರ್ ಆಸಿಫ್, ಬದ್ರುದ್ದೀನ್ ಪಣಂಬೂರು, ಮುಹಮ್ಮದ್ ಶೌಕತ್ ಶೌರಿ ಮತ್ತು ರಹೀಲ್ ಹಮ್ಜಾ ರಶೀದ್ ಅತಿಥಿಗಳಾಗಿದ್ದರು.

ಇದೇವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಅಲಿ ಉಚ್ಚಿಲ್ ಅವರನ್ನು ಸನ್ಮಾನಿಸಲಾಯಿತು.

ಮುಹಮ್ಮದ್ ಇಕ್ಬಾಲ್ ನಾವುಂದ, ಇಮ್ರಾನ್ ಹುಸೇನ್, ಮುಹಮ್ಮದ್ ಅನಸ್, ಅಯ್ಯೂಬ್ ಅಖ್ತರ್, ಅಮೀರುದ್ದೀನ್, ಅಬ್ದುಲ್ ಬಶೀರ್ ಮೈಂದಾಳ, ಆರಿಫ್, ಮುಸ್ತಫ, ಶಮೀರ್ ಉದುನ್, ಮುಸ್ತಫ ಜಿ. ಆರೀಝ್, ಫೈಸಲ್ ಜಿ. ಉಡುಪಿ, ಯು.ಟಿ.ಮುಹಮ್ಮದ್ ಇಸ್ಮಾಯೀಲ್, ಶಬೀರ್ ಶರೀಫ್, ನಾಸಿರ್, ನೌಫಲ್, ಕಾಸೀಂ ಉಡುಪಿ, ಮುಹಮ್ಮದ್ ಫೈಸಲ್ ಶೇಖ್, ಇಲ್ಯಾಸ್ ಬ್ಯಾರಿ, ಮತ್ತು ಅಹ್ಮದ್ ಶಂಶೀರ್ ಉಪಸ್ಥಿತರಿದ್ದರು.

ಮ್ಯಾಂಚೆಸ್ಟರ್ ಗಲ್ಫ್, ಯುರೋ ಟ್ರಕ್, ಅಮೆರಿಕನ್ ಹಾಸ್ಪಿಟಲ್ ಮತ್ತು ಕ್ಯುಐಟಿ ಟ್ರೇಡಿಂಗ್ ಕಾರ್ಯಕ್ರಮದ ಪ್ರಾಯೋಕತ್ವ ವಹಿಸಿತ್ತು.

ರಶೀದ್ ಕಕ್ಕಿಂಜೆ ಕಿರಾಅತ್ ಪಠಿಸಿದರು. ಬಿಸಿಸಿಐ ಖತರ್ ಅಧ್ಯಕ್ಷ ಅಬ್ದುಲ್ಲ ಮೋನು ಮೊಯ್ದಿನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಬ್ದುಲ್ ಖಾದರ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರಝಾಕ್, ಸುಹೈಬ್ ಅಹ್ಮದ್, ರಶೀದ್ ಕಕ್ಕಿಂಜೆ ಮತ್ತು ಅನ್ಸಾರ್ ಯು.ಟಿ. ಕಾರ್ಯಕ್ರಮ ಸಂಯೋಜಿಸಿದರು. ಮುಹಮ್ಮದ್ ಅನಸ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News