×
Ad

ದುಬೈಯಲ್ಲಿ ಸಿಲುಕಿರುವ ಭಾರತೀಯರಿಗೆ ತನ್ನ ಅಪಾಟ್ರ್ಮೆಂಟ್ ನಲ್ಲಿ ಆಶ್ರಯ ಕಲ್ಪಿಸಿದ ಭಾರತೀಯ ಉದ್ಯಮಿ

Update: 2026-03-11 00:11 IST

Photo Credit : ndtv

ದುಬೈ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಪ್ರದೇಶದಲ್ಲಿನ ಅನಿಶ್ಚಿತತೆಯ ಮಧ್ಯೆ, ದುಬೈ ಮೂಲದ ಭಾರತೀಯ ಉದ್ಯಮಿಯೊಬ್ಬರು, ಪ್ರಯಾಣಿಸಲು ಅಸಾಧ್ಯವಾಗಿ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯ ಪ್ರಜೆಗಳಿಗೆ ತನ್ನ ವಸತಿ ಕಟ್ಟಡದಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಿದ್ದಾರೆ.

ಅಲ್ ಮಿಝಾನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯೋಗೇಶ್ ದೋಷಿ 64 ಅಪಾರ್ಟ್ಮೆಂಟ್ ಗಳನ್ನು ಒಳಗೊಂಡಿರುವ ತನ್ನ ಸಂಪೂರ್ಣ ವಸತಿ ಕಟ್ಟಡವನ್ನು ನಗರದಲ್ಲಿ ಸಿಲುಕಿರುವ ಭಾರತೀಯರಿಗೆ ಲಭ್ಯವಾಗುವಂತೆ ಮಾಡಿದ್ದಾರೆ. ವಸತಿ ಸೌಕರ್ಯವನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು ಆಹಾರದಂತಹ ಮೂಲಭೂತ ಸೌಲಭ್ಯವನ್ನು ಒಳಗೊಂಡಿದೆ. ಯುಎಇಯಲ್ಲಿನ ʼಇಂಡಿಯನ್ ಪೀಪಲ್ಸ್ ಫೋರಂ' ಮತ್ತು ದುಬೈನಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಸಮನ್ವಯದಲ್ಲಿ ಈ ಉಪಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ದೋಷಿಯವರನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News