ಜುಬೈಲ್: ಎನ್‌ಆರ್‌ಐ ಬ್ರದರ್ಸ್ ಮುಕ್ಕ ಜಮಾಅತ್ ನ ವಾರ್ಷಿಕ ಮಹಾಸಭೆ
ಜುಬೈಲ್: ಎನ್‌ಆರ್‌ಐ ಬ್ರದರ್ಸ್ ಮುಕ್ಕ ಜಮಾಅತ್ ಸಂಸ್ಥೆಯ ವಾರ್ಷಿಕ ಮಹಾಸಭೆ ಜುಬೈಲ್‌ನ ʼMUSK 7ʼ ಇಸ್ತೀರಾದಲ್ಲಿ ಗುರುವಾರ ನಡೆಯಿತು.
ಸಭೆಯ ಆರಂಭದಲ್ಲಿ ಮಾಸ್ಟರ್ ಮುಹಮ್ಮದ್ ತಲ್ಹಾ ಕಿರಾಅತ್ ಪಠಿಸಿದರು. ಕಲಂದರ್ ಬಾವ ಅತಿಥಿಗಳನ್ನು ಸ್ವಾಗತಿಸಿದರು. ಎನ್.ಆರ್.ಐ ಸಮಿತಿಯ ಅಧ್ಯಕ್ಷರಾದ ಸಾದಿಕ್ ಮೊಯ್ದಿನ್ ಮಹಾಸಭೆಯನ್ನು ಉದ್ಘಾಟಿಸಿದರು.
ಕೋಶಾಧಿಕಾರಿ ಕೆ.ಎಂ. ಹಸನ್ ಕಳೆದ ವರ್ಷದ ಲೆಕ್ಕಪತ್ರವನ್ನು ಮಂಡಿಸಿದರು.
ಸಭೆಯ ಮುಂದಿರುವ ಕಾರ್ಯ ವರದಿ, ಪೂರ್ಣಗೊಂಡ ಯೋಜನೆಗಳು, ಜಾರಿಗೆ ಬಂದ ಅಭಿವೃದ್ಧಿ ಕಾರ್ಯಗಳು ಹಾಗೂ ಮುಂದಿನ ವರ್ಷ ಕೈಗೊಳ್ಳಲಿರುವ ಯೋಜನೆಗಳ ವಿವರವನ್ನು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಫ್ವಾನ್ ಮಂಡಿಸಿದರು. ಸದಸ್ಯರ ಸರ್ವಾನುಮತದೊಂದಿಗೆ ಈ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುವುದಾಗಿ ತೀರ್ಮಾನಿಸಲಾಯಿತು.
ಜಮಾಅತ್ ಅಧ್ಯಕ್ಷ ಕೆ.ಎಂ. ಹಸನ್ ಸಾಬ್ ಹಾಗೂ ದೀರ್ಘಕಾಲ ಸಮಿತಿಗೆ ಬೆಂಬಲ ನೀಡುತ್ತಾ, ಸಂಸ್ಥೆಯ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿರುವ ಹಿರಿಯ ಸದಸ್ಯರಾದ ಶಮೀಮ್ ಮೊಯ್ದಿನ್ ಮತ್ತು ಇಮ್ತಿಯಾಝ್ ಶೇಖ್ ಅವರನ್ನು ಸಮಿತಿಯ ಪರವಾಗಿ ಗೌರವಿಸಲಾಯಿತು.
ಮುಝಫರ್ ಅಲಿ ಅವರ ನಿರೂಪಣೆಯಲ್ಲಿ ನಡೆದ “General Quiz” ಕಾರ್ಯಕ್ರಮ ಸಭೆಯ ಪ್ರಮುಖ ಆಕರ್ಷಣೆ ಆಗಿತ್ತು.
ಎಂ. ಝೈನುದ್ದೀನ್ ಅವರು ‘ಎನ್.ಆರ್.ಐ ಬ್ರದರ್ಸ್ ಮುಕ್ಕ ಜಮಾಅತ್’ ಸ್ಥಾಪನೆಯಿಂದ ಇಂದಿನವರೆಗಿನ ಬೆಳವಣಿಗೆಯ ಪಯಣವನ್ನು ಸ್ಫೂರ್ತಿದಾಯಕವಾಗಿ ಮಂಡಿಸಿ, ಸಂಸ್ಥೆಯ ಸಾಧನೆಗಳನ್ನು ನೆನಪಿಸಿದರು.
ಮಹಾಸಭೆಯಲ್ಲಿ ಜಮಾತ್ ನಿರ್ಮಿಸುತ್ತಿರುವ ಹೊಸ ವಾಣಿಜ್ಯ ಸಂಕೀರ್ಣಕ್ಕೆ ಆರ್ಥಿಕ ಸಹಾಯ ಮಾಡಲು ತೀರ್ಮಾನಿಸಿ, ಸದಸ್ಯರಿಂದಲೇ ಮೊದಲ ಹಂತದ ದೇಣಿಗೆಗಳನ್ನು ದಾಖಲಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ:
ಅಧ್ಯಕ್ಷರು: ಕಲಂದರ್ ಬಾವ
ಉಪಾಧ್ಯಕ್ಷರು: ಲುಕ್ಮನ್, ಮುಸ್ತಾಕ್ ಅಹ್ಮದ್
ಪ್ರಧಾನ ಕಾರ್ಯದರ್ಶಿ: ಎಂ. ಝೈನುದ್ದೀನ್
ಕೋಶಾಧಿಕಾರಿ: ಶಂಸುದ್ದೀನ್ ಬಾವ
ಸಹ ಕಾರ್ಯದರ್ಶಿ: ರಿಝ್ವಾನ್ ಶಾಫಿ, ಅಝರುದ್ದೀನ್
ಕಾರ್ಯಕ್ರಮದ ನಿರೂಪಣೆಯನ್ನು ಕಲಂದರ್ ಬಾವ ಮತ್ತು ಸಫ್ವಾನ್ ಮುಕ್ಕ ಅವರು ನಿರ್ವಹಿಸಿದರು. ಎಂ. ಝೈನುದ್ದೀನ್ ಧನ್ಯವಾದ ಸಲ್ಲಿಸಿದರು.