Arsikere | ವಿಷಕಾರಿ ಮೇವು ತಿಂದು 20ಕ್ಕೂ ಹೆಚ್ಚು ಕುರಿಗಳ ಸಾವು
Update: 2026-03-05 20:57 IST
ಅರಸೀಕೆರೆ : ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ವಿಷಕಾರಿ ಮೇವು ತಿಂದು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲ್ಲೂಕಿನ ಜಾವಗಲ್ ಹೋಬಳಿ ವ್ಯಾಪ್ತಿಯ ದೊಡ್ಡಘಟ್ಟ ಗ್ರಾಮದ ಸಮೀಪ ಈ ಘಟನೆ ಸಂಭವಿಸಿದೆ.
ತುಮಕೂರು ಜಿಲ್ಲೆಯ ಶಿರಾ ಪಟ್ಟಣದಿಂದ ಮೇವು ಅರಸಿ ಸುಮಾರು 800 ಕುರಿಗಳ ಮಂದೆಯನ್ನು ಮೇಯಿಸಲು ಕುರಿಗಾಹಿಗಳು ಈ ಭಾಗಕ್ಕೆ ಬಂದಿದ್ದರು. ರಾಜಣ್ಣ, ರಾಮಣ್ಣ, ಭಾಗ್ಯಮ್ಮ, ರಂಗನಾಥ್ ಸೇರಿದಂತೆ ಹಲವರು ತಮ್ಮ ಕುರಿಗಳೊಂದಿಗೆ ಇಲ್ಲಿ ತಂಗಿದ್ದರು.
ಈ ವೇಳೆ ಕುರಿಗಳು ಮೇಯುತ್ತಿದ್ದ ಸಂದರ್ಭದಲ್ಲಿ ವಿಷಕಾರಿ ಮೇವು ತಿಂದು ಅಸ್ವಸ್ಥಗೊಂಡು ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.