Halebeedu | ʼಜೀತ ಪದ್ಧತಿʼ ಇನ್ನೂ ಜೀವಂತ; 18 ಕಾರ್ಮಿಕರ ರಕ್ಷಣೆ
Update: 2026-02-27 00:27 IST
ಸಾಂದರ್ಭಿಕ ಚಿತ್ರ | PC : Halebeedu
ಬೇಲೂರು : ರಾಜ್ಯದಲ್ಲಿ ಅನಿಷ್ಟ ಜೀತ ಪದ್ಧತಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ತಾಲೂಕಿನ ಹಳೇಬೀಡು ಹೋಬಳಿಯ ಚಟ್ಟಹಳ್ಳಿಯಲ್ಲಿ ಕಾರ್ಮಿಕರನ್ನು ಕೂಡಿಹಾಕಿದ್ದ ಘಟನೆ ಸಾಕ್ಷಿಯಾಗಿದೆ.
ಸುದ್ದಿ ತಿಳಿದ ಪೊಲೀಸರು, 18ಕ್ಕೂ ಹೆಚ್ಚು ಕಾರ್ಮಿಕರನ್ನು ರಕ್ಷಿಸಿದ್ದಾರೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಶುಂಠಿ ಕೆಲಸಕ್ಕೆಂದು ಕರೆತರಲಾಗಿದ್ದ ಈ ಕಾರ್ಮಿಕರನ್ನು ಮಾಲಕ ನಾಗರಾಜ್ ಎಂಬಾತ ಕೂಡಿಹಾಕಿ ದುಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಇವರಿಗೆ ಯಾವುದೇ ಹಣ ನೀಡದೆ, ಕೆಲಸ ಮುಗಿದ ನಂತರ ಒಂದೇ ಜಾಗದಲ್ಲಿ ಲಾಕ್ ಮಾಡಲಾಗುತ್ತಿತ್ತು. ಹೊರಗಡೆ ಹೋಗಲು ಯಾವುದೇ ಅವಕಾಶ ಇರಲಿಲ್ಲ ಎನ್ನಲಾಗಿದೆ.
ಪೊಲೀಸರು ದಾಳಿ ನಡೆಸಿದಾಗ, ಆರೋಪಿ ನಾಗರಾಜ್ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಬಲೆ ಬೀಸಲಾಗಿದ್ದು, ರಕ್ಷಿಸಲ್ಪಟ್ಟ ಕಾರ್ಮಿಕರು ತಾವು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ