×
Ad

ಅತ್ಯಧಿಕ ಪ್ರಮಾಣದ ಪೊಟ್ಯಾಶಿಯಂ ಹೃದಯಕ್ಕೆ ಮಾರಕ; ವೈದ್ಯರು ಹೇಳುವುದೇನು?

Update: 2026-02-25 16:02 IST

ಸಾಂದರ್ಭಿಕ ಚಿತ್ರ | Photo Credit : freepik

ಅಮೆರಿಕ ಮೂಲದ 30 ವರ್ಷಗಳ ಅನುಭವವಿರುವ ಹೃದ್ರೋಗತಜ್ಞ ಡಾ ಇವಾನ್ ಲೆವಿನ್ ಎಚ್ಚರಿಸಿದಂತೆ ರಕ್ತದಲ್ಲಿ ಅಧಿಕ ಪೊಟ್ಯಾಶಿಯಂ ವೈದ್ಯಕೀಯ ತುರ್ತು ಆಗಿ ಸಂಭವಿಸಬಹುದು!

ಪೊಟ್ಯಾಶಿಯಂ ಅನ್ನು ಉತ್ತಮ ಆರೋಗ್ಯಕ್ಕೆ ಅಗತ್ಯವಿರುವ ಪ್ರಮುಖ ಖನಿಜವೆಂದು ಪರಿಗಣಿಸಲಾಗಿದೆ. ಸ್ನಾಯುಗಳ ಶಕ್ತಿ, ನರಗಳ ಕಾರ್ಯ ಮತ್ತು ಹೃದಯದ ಲಯದಲ್ಲಿ ಪೊಟ್ಯಾಶಿಯಂ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅಮೆರಿಕ ಮೂಲದ 30 ವರ್ಷಗಳ ಅನುಭವವಿರುವ ಹೃದ್ರೋಗತಜ್ಞ ಡಾ ಇವಾನ್ ಲೆವಿನ್ ಎಚ್ಚರಿಸಿದಂತೆ ರಕ್ತದಲ್ಲಿ ಅಧಿಕ ಪೊಟ್ಯಾಶಿಯಂ ವೈದ್ಯಕೀಯ ತುರ್ತು ಆಗಿ ಸಂಭವಿಸಬಹುದು!.

ನಿಮ್ಮ ರಕ್ತದಲ್ಲಿನ ಅಧಿಕ ಪೊಟ್ಯಾಶಿಯಂ ಅನ್ನು ಹೈಪರ್‌ಕಲೇಮಿಯ ಎಂದು ಕರೆಯಲಾಗುತ್ತದೆ ಮತ್ತು ಅದು ಮಾರಕವಾಗಿಹಯೂ ಪರಿಣಮಿಸಬಹುದು. ಇತರ ಪೌಷ್ಠಿಕಾಂಶದ ಅಸಮತೋಲನಕ್ಕಿಂತ ಭಿನ್ನವಾಗಿ ಅಧಿಕ ಪೊಟ್ಯಾಶಿಯಂ ಯಾವಾಗಲೂ ಸ್ಪಷ್ಟ ಎಚ್ಚರಿಕೆಯ ಚಿಹ್ನೆಗಳನ್ನು ತೋರಿಸುವುದಿಲ್ಲ. ಹೀಗಾಗಿ ಇದನ್ನು ಮೌನವಾಗಿ ‘ಸೈಲೆಂಟ್ ಕಿಲ್ಲರ್’ ಎಂದೂ ಕರೆಯಲಾಗುತ್ತದೆ.

ಹೈಪರ್‌ಕಲೇಮಿಯ ಎನ್ನುವ ಮೌನಿ ಕೊಲೆಗಾರ

ಸ್ನಾಯುಗಳು ಮತ್ತು ಹೃದಯದ ಕಾರ್ಯನಿರ್ವಹಣೆಗೆ ಪೊಟ್ಯಾಶಿಯಂ ಅತ್ಯಗತ್ಯ. ಆದರೆ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಇರುವ ಹೈಪರ್‌ಕಲೆಮಿಯದ ಸ್ಥಿತಿ ಜೀವನಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಹೃದಯ ತಜ್ಞ ಇವಾನ್ ಲೆನಿನ್ ಹೇಳುವ ಪ್ರಕಾರ ಅತ್ಯಧಿಕ ಮಟ್ಟದಲ್ಲಿ ಪೊಟ್ಯಾಶಿಯಂ ಇದ್ದರೆ ಹೃದಯದ ವಿದ್ಯುದೀಯ ವ್ಯವಸ್ಥೆಯನ್ನು ಸ್ಥಗಿತಗೊಳಿಸಬಹುದು.

ಅಧಿಕ ಪೊಟ್ಯಾಶಿಯಂ ಪ್ರಮಾಣ ಹೃದಯದ ಬಡಿತವನ್ನು ಅಪಾಯಕಾರಿಯಾಗಿ ನಿಧಾನಗೊಳಿಸಬಹುದು.

6 ಅಥವಾ ಅದಕ್ಕಿಂತ ಅಧಿಕ ಮಟ್ಟದಲ್ಲಿ ಹಠಾತ್ ಹೃದಯ ಸ್ತಂಭನ ಅಥವಾ ಸಾವು ಸಂಭವಿಸಬಹುದು.

ಇದು ಪ್ರಯೋಗಾಲಯಕ್ಕೆ ಸೀಮಿತ ವಿಷಯವಲ್ಲ, ಅತಿ ನಿರ್ಣಾಯಕ ಸುರಕ್ಷಾ ಪರೀಕ್ಷೆಯಾಗಿದೆ.

ಯಾರಿಗೆ ಹೆಚ್ಚು ಅಪಾಯ?

ಡಾ ಲೆವಿನ್ ಹೇಳುವ ಪ್ರಕಾರ ವಿಷಕಾರಿ ಪೊಟ್ಯಾಶಿಯಂ ಶೇಖರಣೆಗಯಾದಲ್ಲಿ ಕೆಲವರ ಮೇಲೆ ಹೆಚ್ಚು ಪರಿಣಾಮ ಬೀರಬಹುದು.

ಮೂತ್ರಪಿಂಡ ಕಾಯಿಲೆ: ದುರ್ಬಲಗೊಂಡ ಮೂತ್ರಪಿಂಡಗಳು ಹೆಚ್ಚುವರಿ ಪೊಟ್ಯಾಶಿಯಂ ಅನ್ನು ಫಿಲ್ಟರ್ ಮಾಡಲು ಸಾಧ್ಯವಿಲ್ಲ

ಔಷಧಿಗಳು: ACE ಪ್ರತಿರೋಧಕಗಳು, ARBಗಳು ಮತ್ತು ಸ್ಪಿರೊನೊಲ್ಯಾಕ್ಟೋನ್ ಪೊಟ್ಯಾಶಿಯಂ ಶೇಕರಣೆ ಹೆಚ್ಚಿಸುತ್ತವೆ.

ವಯಸ್ಸಿನ ಪರಿಣಾಮ: ವೃದ್ಧಾಪ್ಯದಲ್ಲಿ ಮೂತ್ರಪಿಂಡ ದುರ್ಬಲಗೊಂಡಿರುತ್ತದೆ ಮತ್ತು ಔಷಧಿಗಳ ಬಳಕೆ ಹೆಚ್ಚಾಗಿರುವಾಗ ಅಪಾಯ ಹೆಚ್ಚಿರುತ್ತದೆ.

ಪ್ರತಿ ಆಹಾರದಲ್ಲಿ ನಿಗೂಢವಾಗಿ ಅಡಗಿರುವ ಅಪಾಯ

ಅಧಿಕ ಪೊಟ್ಯಾಶಿಯಂ ಇರುವ ಆಹಾರವೆಂದರೆ ಬೀಟ್‌ರೂಟ್‌ಗಳು, ಅವಕಾಡೊಗಳು, ಪಾಲಾಕ್ ಸೊಪ್ಪು ಮತ್ತು ಸಿಹಿಗೆಣಸುಗಳು

ಉಪ್ಪಿನ ಬದಲಿಗಳು: ಅನೇಕ ಕಡಿಮೆ ಸೋಡಿಯಂ ಉಪ್ಪುಗಳು ಸೋಡಿಯಂ ಬದಲು ಪೊಟ್ಯಾಶಿಯಂ ಕ್ಲೋರೈಡ್ ಹೊಂದಿದ್ದು, ಮೂತ್ರಪಿಂಡ ರೋಗಿಗಳಿಗೆ ಮಾರಕವಾಗಿ ಪರಿಣಮಿಸಬಹುದು.

ಆಹಾರ : ಅಪಾಯ ಹೆಚ್ಚಿರುವ ರೋಗಿಗಳು ತಪ್ಪಿಸಬೇಕಾದ ಆಹಾರಗಳ ಬಗ್ಗೆ ಜಾಗರೂಕತೆ ವಹಿಸಬೇಕಾಗುತ್ತದೆ,

ಸುರಕ್ಷಿತವಾಗಿರಲು ಇಡಬೇಕಾದ ಹೆಜ್ಜೆಗಳು

ಹೃದಯದ ಆರೋಗ್ಯದ ಬಗ್ಗೆ ಜನರು ಪೂರಕವಾಗಿ ಆಲೋಚಿಸಿರಬೇಕು ಎನ್ನುತ್ತಾರೆ ವೈದ್ಯರು.

ವೈದ್ಯರನ್ನು ಸಂಪರ್ಕಿಸಿ: ಚೆಕಪ್‌ಗಳ ಸಂದರ್ಭದಲ್ಲಿ ಪೊಟ್ಯಾಶಿಯಂ ಮಟ್ಟವನ್ನು ಪರಿಶೀಲಿಸಬೇಕು.

ಚಿಹ್ನೆಗಳನ್ನು ಗಮನಿಸಿ: ದೌರ್ಬಲ್ಯ, ಹಗುರವಾದ ಅನುಭವ ಅಥವಾ ನಿಧಾನಗತಿಯ ಹೃದಯದ ದರವನ್ನು ಗಮನಿಸಬೇಕು.

ಮಾಹಿತಿ ಇರಲಿ: ಅಧಿಕ ಪೊಟ್ಯಾಶಿಯಂ ಇರುವ ಆಹಾರಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ನಿಗೂಢ ಮೂಲಗಳನ್ನು ಸೇವಿಸುವುದನ್ನು ತಪ್ಪಿಸಿ.

ಕೃಪೆ: hindustantimes.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News