ಸಹಜವಾಗಿ ಕೊಲೆಸ್ಟರಾಲ್ ಕಡಿಮೆ ಮಾಡಲು ನೆರವಾಗುವ 6 ಆಹಾರಗಳ ಬಗ್ಗೆ ಗೊತ್ತೇ?
ಸಾಂದರ್ಭಿಕ ಚಿತ್ರ | Photo Credit : freepik
ಬುದ್ಧಿವಂತ ಆಹಾರ ಆಯ್ಕೆಗಳನ್ನು ಮಾಡುವುದು ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುವಲ್ಲಿ ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಹೃದಯ ರೋಗ, ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ತೊಂದರೆಗಳಿಗೆ ಅಧಿಕ ಕೊಲೆಸ್ಟರಾಲ್ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. ಎಲ್ಡಿಎಲ್ (ಕೆಟ್ಟ ಕೊಲೆಸ್ಟರಾಲ್) ಕೊಲೆಸ್ಟರಾಲ್ ಪ್ರಮಾಣ ಏರುವುದರಿಂದ ಅಪಧಮನಿಗಳಲ್ಲಿ ಲೋಳೆಯ ನಿಕ್ಷೇಪ ಶೇಖರಣೆಗೆ ಕೊಡುಗೆ ನೀಡುತ್ತವೆ. ರಕ್ತನಾಳಗಳನ್ನು ಕಿರಿದಾಗಿಸುತ್ತವೆ ಮತ್ತು ರಕ್ತದ ಹರಿವನ್ನು ದುರ್ಬಲಗೊಳಿಸುತ್ತವೆ. ಆದರೆ, ಬುದ್ಧಿವಂತ ಆಹಾರ ಆಯ್ಕೆಗಳನ್ನು ಮಾಡುವುದು ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುವಲ್ಲಿ ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಂಡೊಕ್ರೈನಲಾಜಿಸ್ಟ್ (ಅಂತಃಸ್ರಾವಶಾಸ್ತ್ರಜ್ಞ) ಡಾ. ಅಲೆಸ್ಸಿಯಾ ರೋಗ್ನೆಲ್ಟ್ ಅಂತಹ ಆರು ಆಹಾರದ ಆಯ್ಕೆಗಳನ್ನು ಸೂಚಿಸಿದ್ದಾರೆ. ಅವುಗಳೆಂದರೆ:
ಕಾಫಿ ಮತ್ತು ಗ್ರೀನ್ ಟೀ
ಸಾಂದರ್ಭಿಕ ಚಿತ್ರ | Photo Credit : freepik
ದಿನನಿತ್ಯದ ಪಾನೀಯಗಳೆಂದು ಸಾಮಾನ್ಯವಾಗಿ ಪರಿಗಣಿಸಲಾಗಿರುವ ಕಾಫಿ ಮತ್ತು ಗ್ರೀನ್ ಟೀ ಎರಡೂ ಕೊಲೆಸ್ಟರಾಲ್ ಮಟ್ಟವನ್ನು ಪ್ರಭಾವಿಸುತ್ತವೆ. ಆಂಟಿಆಕ್ಸಿಡಂಟ್ ಗಳಲ್ಲಿ ಸಮೃದ್ಧವಾಗಿರುವ ಗ್ರೀನ್ ಟೀ ಎಲ್ಡಿಎಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಾಳೀಯ ಕಾರ್ಯವನ್ನು ಬೆಂಬಲಿಸುತ್ತದೆ. ಆದರೆ ಕಾಫಿ ಹೆಚ್ಚು ಸಂಕೀರ್ಣವಾಗಿದೆ: ಮಧ್ಯಮ ಸೇವನೆಯಿಂದ (ದಿನಕ್ಕೆ 2-3 ಕಪ್) ಉತ್ತಮ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ ನ ಸಮತೋಲನಕ್ಕೆ ಕಾರಣವಾಗಲಿದೆ. ಆದರೆ ಅತಿಯಾಗಿ ಸೇವಿಸಿದಲ್ಲಿ ವಿರುದ್ಧ ಪರಿಣಾಮ ಬೀರಬಹುದು. ಮಿತವಾಗಿರುವುದು ಮುಖ್ಯವಾಗುತ್ತದೆ.
ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್
ಸಾಂದರ್ಭಿಕ ಚಿತ್ರ | Photo Credit : freepik
ಮೆಡಿಟರೇನಿಯನ್ ಆಹಾರದ ಮೂಲಾಧಾರವಾದ ಆಲಿವ್ ಎಣ್ಣೆಯು ಪ್ಲೇಕ್ ರಚನೆಯಲ್ಲಿ ನಿರ್ಣಾಯಕ ಹಂತವಾಗಿರುವ ಎಲ್ಡಿಎಲ್ ಅನ್ನು ಕಡಿಮೆ ಮಾಡುವ ಮತ್ತು ಅದರ ಆಕ್ಸಿಡೀಕರಣವನ್ನು ತಡೆಯುವ ಆರೋಗ್ಯಕರ ಕೊಬ್ಬುಗಳಿಂದ ತುಂಬಿರುತ್ತದೆ. ಸಲಾಡ್ಗಳ ಮೇಲೆ ಸಿಂಪಡಿಸಿದರೂ ಅಥವಾ ನೇರವಾಗಿ ಸೇವಿಸಿದರೂ ಆಲಿವ್ ಎಣ್ಣೆ ಲಿಪಿಡ್ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಅಪಧಮನಿಯ ಗೋಡೆಗಳನ್ನು ರಕ್ಷಿಸುತ್ತದೆ.
ಬೆರ್ರಿ ಹಣ್ಣುಗಳು
ಸಾಂದರ್ಭಿಕ ಚಿತ್ರ | Photo Credit : freepik
ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಎದುರಿಸುವ ಸಂಯುಕ್ತಗಳಾದ ಅಂಥೋಸಯಾನಿನ್ಗಳು ಬೆರ್ರಿಗಳಲ್ಲಿ ಸಮೃದ್ಧವಾಗಿವೆ. ಅವು ಎಲ್ಡಿಎಲ್ ಆಕ್ಸಿಡೇಶನ್ ಆಗುವುದನ್ನು ತಡೆಯುವುದಲ್ಲದೆ, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತವೆ. ಅಧ್ಯಯನಗಳು ತೋರಿಸಿರುವ ಪ್ರಕಾರ ನಿಯಮಿತವಾಗಿ ಬೆರ್ರಿಗಳ ಸೇವನೆಯಿಂದ ಎಲ್ಡಿಎಲ್ ಕೊಲೆಸ್ಟರಾಲ್, ರಕ್ತದಲ್ಲಿನ ಒತ್ತಡ ಮತ್ತು ಉರಿಯೂತದ ಚಿಹ್ನೆಗಳು ಕಡಿಮೆಯಾಗುತ್ತವೆ.
ಕಡಲೆ-ಬೀಜಗಳು
ಸಾಂದರ್ಭಿಕ ಚಿತ್ರ | Photo Credit : freepik
ಬಾದಾಮಿ, ವಾಲ್ನಟ್ ಗಳು ಮತ್ತು ಗೋಡಂಬಿಗಳು ಸಸ್ಯ ಸ್ಟೆರಾಲ್ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಅತ್ಯುತ್ತಮ ಫೈಬರ್ ಮೂಲಗಳಾಗಿವೆ. ಈ ಸಂಯುಕ್ತಗಳು ಕರುಳಿನಲ್ಲಿ ಕೊಲೆಸ್ಟರಾಲ್ ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಕಡಲೆ-ಬೀಜಗಳ ಸೇವನೆಯು ಹೃದಯ ರಕ್ತನಾಳದ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಹಸಿರು ಎಲೆಗಳು
ಪಾಲಾಕ್, ಕಾಲೆ, ಲ್ಯೂಟಸ್ ಮತ್ತು ಕ್ಯಾಬೇಜ್ಗಳಲ್ಲಿ ನೈಟ್ರೇಟ್ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವು ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಉತ್ತೇಜಿಸುತ್ತವೆ. ಇವು ರಕ್ತನಾಳಗಳ ಕಾರ್ಯವನ್ನು ಸುಧಾರಿಸುತ್ತವೆ. ಇವುಗಳಲ್ಲಿ ವಿಟಮಿನ್, ಖನಿಜಗಳು ಮತ್ತು ಫೈಟೋರಾಸಾಯನಿಕಗಳ ಸಮೃದ್ಧವಾಗಿವೆ. ಹೀಗಾಗಿ ಹೃದಯದ ಕಾಯಿಲೆಯ ವಿರುದ್ಧ ಸಹಜವಾದ ರಕ್ಷಣೆ ಒದಗಿಸುತ್ತವೆ.
ದ್ವಿದಳ ಧಾನ್ಯಗಳು
ಸಾಂದರ್ಭಿಕ ಚಿತ್ರ | Photo Credit : freepik
ಬೀನ್ಸ್, ದ್ವಿದಳ ಧಾನ್ಯಗಳು ಮತ್ತು ಕಡಲೆಗಳಲ್ಲಿ ಕರಗುವ ಫೈಬರ್ ಹೆಚ್ಚಿರುತ್ತವೆ. ಹೀಗಾಗಿ ಎಲ್ಡಿಎಲ್ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ. ಅವು ಜಠರದ ಮೈಕ್ರೋಬಯೋಮ್ (ಸೂಕ್ಷ್ಮಜೀವಿ) ಬೆಳೆಯಲು ನೆರವಾಗುತ್ತವೆ. ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿದಲ್ಲಿ ಒಟ್ಟು ಕೊಲೆಸ್ಟರಾಲ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.
ಅಂತಿಮವಾಗಿ ಹೇಳುವುದಾದರೆ ಕೊಲೆಸ್ಟರಾಲ್ ಕಡಿಮೆಗೊಳಿಸಲು ಅತಿಯಾದ ಪ್ರಯತ್ನದ ಅಗತ್ಯವಿಲ್ಲ. ಸರಳ, ನಿರಂತರ ಶಿಸ್ತಿನ ಆಹಾರ ಬದಲಾವಣೆ ಸಾಕಾಗುತ್ತದೆ. ಈ ಮೇಲೆ ಹೇಳಿದ ಆರು ಆಹಾರಗಳನ್ನು ನಿತ್ಯದ ಆಹಾರದಲ್ಲಿ ಬೆರೆಸಿದಲ್ಲಿ ಎಲ್ಡಿಎಲ್ ಕೊಲೆಸ್ಟರಾಲ್ ಪ್ರಮಾಣವನ್ನು ಕಡಿಮೆಗೊಳಿಸಬಹುದು ಮತ್ತು ಹೃದಯನಾಳದ ಆರೋಗ್ಯವನ್ನು ಸುಧಾರಿಸಿ ಹೃದಯ ರೋಗದಿಂದ ರಕ್ಷಣೆಪಡೆಯಬಹುದು.
ಸೂಚನೆ: ಈ ಲೇಖನವನ್ನು ಸಾಮಾಜಿಕ ಮಾಧ್ಯಮಗಳಲ್ಲಿನ ವಿವರಗಳಿಂದ ರಚಿಸಲಾಗಿದೆ. ಅಧಿಕೃತವಾಗಿ ನಿಮ್ಮ ದೇಹ-ಆಹಾರದಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.
ಕೃಪೆ: hindustantimes.com