ಒತ್ತಡ ನಿವಾರಣೆಗೆ ತಿನ್ನುವ ಅಭ್ಯಾಸವೆ? ವೈದ್ಯರ ಸಲಹೆಗಳು ಇಲ್ಲಿವೆ…
ಸಾಂದರ್ಭಿಕ ಚಿತ್ರ | Photo Credit : freepik
ಪರೀಕ್ಷೆಯ ಸಮಯದಲ್ಲಿ ಅಥವಾ ಪ್ರಮುಖ ಕ್ಲೈಂಟ್ ಮೀಟಿಂಗ್ ಹಿಂದಿನ ರಾತ್ರಿ ನಿಮಗೆ ಹಸಿವಾಗದೆ ಇದ್ದರೂ ಹಠಾತ್ತನೆ ಸಿಕ್ಕಿದ್ದೆಲ್ಲವನ್ನು ತಿನ್ನಲು ಆರಂಭಿಸುವಿರಾ? ಒತ್ತಡವು ಅನೇಕ ವಿಧಗಳಲ್ಲಿ ಪ್ರಕಟವಾಗಬಹುದು ಮತ್ತು ಭಾವನಾತ್ಮಕ ಆಹಾರ ಸೇವನೆಯೂ ಅದರಲ್ಲಿ ಒಂದಾಗಿರುತ್ತದೆ.
ಒತ್ತಡದಲ್ಲಿ ಆಹಾರ ಸೇವನೆ ಅನಾರೋಗ್ಯಕರ ಅಭ್ಯಾಸವಾಗಿದೆ. ಪದೇಪದೆ ಇಂತಹ ಅಭ್ಯಾಸ ಪುನರಾವರ್ತನೆಯಾಗದಂತೆ ಪರಿಹರಿಸುವುದು ನಿಮ್ಮ ಕೈಯಲ್ಲೇ ಇರುತ್ತದೆ. ಆಹಾರ ಸೇವನೆಯ ಮೂಲಕ ಗಮನವನ್ನು ಬೇರೆಡೆಗೆ ಸೆಳೆಯುವುದು ಸರಿಯಲ್ಲ. ಹೀಗೆ ಒತ್ತಡ ನಿವಾರಣೆಗೆ ಆಹಾರ ಸೇವನೆಯನ್ನು ತಪ್ಪಿಸುವ ಬಗ್ಗೆ ಗುರುಗಾಂವ್ ನ ಮಾರ್ಗ ಮೈಂಡ್ ಕೇರ್ನ ಮನಶ್ಶಾಸ್ತ್ರಜ್ಞರಾದ ಡಾ. ವಿನೀತ್ ಪಾಟೀಲ್ ಹೇಳುವುದೇನು?
ಯಾವಾಗಲಾದರೂ ಒಮ್ಮೆ ಒತ್ತಡ ನಿವಾರಣೆಗೆ ಆಹಾರ ಸೇವಿಸುವುದು ಹೆಚ್ಚು ಸಮಸ್ಯೆ ತರದು. ಆದರೆ ನಿಯಮಿತವಾಗಿ ಒತ್ತಡ ನಿವಾರಣೆಗೆ ಆಹಾರವನ್ನು ಅವಲಂಬಿಸುವುದು ದೈಹಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮ ಎರಡರ ಮೇಲೂ ಪರಿಣಾಮ ಬೀರಲಿದೆ ಎಂದು ವಿನೀತ್ ಪಾಟೀಲ್ ಎಚ್ಚರಿಸಿದ್ದಾರೆ.
ಒತ್ತಡ ನಿವಾರಣೆಗೆ ಆಹಾರ ಸೇವನೆ ಎರಡು ಹೊಡೆತಗಳೊಂದಿಗೆ ಬರುತ್ತದೆ. ಗಮನಾರ್ಹವಾಗಿ ದೇಹದ ತೂಕ ಏರಿಕೆಯ ಅಪಾಯ ಹೊಂದಿರುತ್ತೀರಿ. ದೀರ್ಘಕಾಲೀನ ಕಳಪೆ ಆಹಾರ ಸೇವನೆಯಿಂದ ಮತ್ತಷ್ಟು ಸಮಸ್ಯೆ ಉಂಟಾಗುತ್ತದೆ. ಇಂತಹ ಅಭ್ಯಾಸವನ್ನು ಸಂಪೂರ್ಣವಾಗಿ ಮುರಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡೂ ಉತ್ತಮವಾಗಿರುತ್ತವೆ.
ಒತ್ತಡವನ್ನು ಸಂಘರ್ಷದ ಮೂಲಕ ತಡೆಹಿಡಿಯುವ ಬದಲಾಗಿ ಈ ಕೆಳಗಿನ ದಾರಿ ಹಿಡಿಯಬಹುದು.
► ತಿನ್ನುವ ಮೊದಲು ಭಾವನಾತ್ಮಕ ಹಸಿವೆಯನ್ನು ಗಮನಿಸುವುದು
ನೈಜ, ದೈಹಿಕ ಹಸಿವೆ ಮತ್ತು ಭಾವನಾತ್ಮಕ ಒತ್ತಡ ನಿವಾರಣೆಗಾಗಿ ತಿನ್ನುವುದುರ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಈ ಬಗ್ಗೆ ಬಹಳ ಸಮೀಪದಿಂದ ಗಮನಹರಿಸುವ ಅಗತ್ಯವಿದೆ. ಹೀಗಾಗಿ ಮುಂದಿನ ಬಾರಿ ನೀವು ಆಹಾರ ಸೇವನೆಗೆ ಮುಂದಾದಾಗ ಹಸಿವೆ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
ಮನಶ್ಶಾಸ್ತ್ರಜ್ಞರು ವ್ಯತ್ಯಾಸವನ್ನು ವಿವರಿಸಿದ್ದಾರೆ. “ಭಾವನಾತ್ಮಕ ಹಸಿವು ಸಾಮಾನ್ಯವಾಗಿ ಇದಕ್ಕಿದ್ದಂತೆ ಮತ್ತು ತೀವ್ರವಾಗಿ ಬರುತ್ತದೆ ಜೊತೆಗೆ ನಿರ್ದಿಷ್ಟ ಆರಾಮದಾಯಕ ಆಹಾರಗಳ ಹಂಬಲವೂ ಇರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ನೈಜ ದೈಹಿಕ ಹಸಿವು ಕ್ರಮೇಣ ಹೆಚ್ಚಾಗುತ್ತದೆ ಮತ್ತು ಸಮತೋಲಿತ ಊಟದಿಂದ ತೃಪ್ತಿಪಡಿಸಬಹುದು.”
ಒತ್ತಡದ ಹೊರತಾಗಿಯೂ ಬೋರ್ ಆಗುವುದು ಮತ್ತು ಏಕಾಂತವೂ ಭಾವನಾತ್ಮಕ ಹಸಿವೆಗೆ ಪ್ರಮುಖವಾಗಿ ಪ್ರಚೋದನೆ ಬೀರುತ್ತದೆ. ಭಾವನೆಯನ್ನು ನಿಯಂತ್ರಿಸಲು ಮತ್ತು ಆಹಾರ ಸೇವನೆಯನ್ನು ತಪ್ಪಿಸಲು ಸಣ್ಣ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಸಣ್ಣ ನಡಿಗೆ, ಐದು ನಿಮಿಷಗಳ ನಿಶ್ಚಲತೆಯಂತಹ ಚಿಂತನಶೀಲ ಮತ್ತು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ಹೇಳಿದರು.
► ಆರೋಗ್ಯಕರ ಪರ್ಯಾಯದೊಂದಿಗೆ ಬದಲಿಸುವುದು
ಭಾವನಾತ್ಮಕ ಹಸಿವನ್ನು ಎದುರಿಸಲು ತಿನ್ನುವುದಕ್ಕೆ ತಡೆಯೊಡ್ಡುವುದು ಪರಿಹಾರವಾಗದು. ಬದಲಾಗಿ ಭಾವನಾತ್ಮಕ ಸಾಧನೆಯನ್ನು ವಿಸ್ತರಿಸುವುದು. ಅಂದರೆ ಒತ್ತಡ ನಿವಾರಣೆಗೆ ಆಹಾರ ಒಂದು ಆಯ್ಕೆಯಾಗಲಿ. ಅದರ ಬದಲಾಗಿ ಇತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು. ಅಂದರೆ ಹಗುರವಾದ ದೈಹಿಕ ಚಟುವಟಿಕೆ, ಬರೆಯುವುದು, ಸಂಗೀತ ಕೇಳುವುದು, ವ್ಯಾಯಾಮ ಮಾಡುವುದು ಮತ್ತು ಸ್ನೇಹಿತರನ್ನು ಭೇಟಿಯಾಗುವುದು ಮಾಡಬಹುದು. ಆಹಾರ ಒತ್ತಡ ನಿವಾರಣೆ ಎಂದು ಅನಿಸಿದರೂ ದೀರ್ಘಕಾಲದಲ್ಲಿ ದೊಡ್ಡ ವಿಷವೃತ್ತಕ್ಕೆ ಕಾರಣವಾಗಿ ಹೆಚ್ಚು ತಿನ್ನುವ ಉತ್ಸಾಹ ಬೆಳೆಯಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
► ಉತ್ತಮ ಆಹಾರ ಸೇವಿಸುವುದು
ಆರೋಗ್ಯಕರ ಆಹಾರ ಸೇವನೆಯಲ್ಲಿ ತಟ್ಟೆಯಲ್ಲಿರುವ ವಸ್ತುಗಳು ಪೌಷ್ಠಿಕಾಂಶದಿಂದ ಸಮತೋಲಿತವಾಗಿರುವುದು ಅಗತ್ಯ. ಸಮತೋಲಿತ ಆಹಾರದ ವಿಚಾರದಲ್ಲೂ, ಸಾಕಷ್ಟು ಆಹಾರ ಸೇವನೆ ಮಾಡದೆ ಇದ್ದರೆ, ಒತ್ತಡದ ಸಮಯದಲ್ಲಿ ಭಾವನಾತ್ಮಕವಾಗಿ ತಿನ್ನುವ ಪ್ರವೃತ್ತಿ ಹೊಂದಿರುತ್ತಾರೆ.
ಕೆಲದ ಸಂದರ್ಭಗಳಲ್ಲಿ ಇದು ನಿಜ. ಊಟ ಬಿಡುವುದು ಅಥವಾ ಸಂಪೂರ್ಣ ಆಹಾರ ಸಮೂಹವನ್ನು ಕಡಿತಗೊಳಿಸುವ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುವುದು ಅಪಾಯವನ್ನು ಹೆಚ್ಚಿಸಬಹುದು ಎಂದು ವೈದ್ಯರು ಹೇಳಿದ್ದಾರೆ.
ಕೃಪೆ: hindustantimes.com