ಪ್ರಕೃತಿಯ ಕಠೋರ ಪೋಷಕರು | ತಮ್ಮದೇ ಮರಿಗಳನ್ನು ಕೊಲ್ಲುವ 5 ಜೀವಿಗಳ ಬಗ್ಗೆ ಇಲ್ಲಿದೆ ಮಾಹಿತಿ…
Photo Credit : Youtube
ಈ ಜೀವಿಗಳು ಬದುಕುಳಿಯುವ ಪ್ರಮಾಣವನ್ನು ಹೆಚ್ಚಿಸಲು ತಮ್ಮ ಸ್ವಂತ ಸಂತತಿಯನ್ನು ತ್ಯಜಿಸುತ್ತವೆ, ನಿರ್ಲಕ್ಷಿಸುತ್ತವೆ ಅಥವಾ ಕೊಲ್ಲುತ್ತವೆ.
ನೀವು ಉತ್ತಮ ಪೋಷಕರೇ ಅಥವಾ ಇಲ್ಲವೇ ಎಂಬ ಬಗ್ಗೆ ಸದಾ ನಿಮ್ಮಲ್ಲಿ ಸಂಶಯವಿರಬಹುದು. ಆದರೆ ಪ್ರಕೃತಿಯಲ್ಲಿ ಶಿಶುಗಳನ್ನು ಒದೆಯುವ ಅಥವಾ ಮುದ್ದಿಸದ ಪೋಷಕರೂ ಇದ್ದಾರೆ ಎನ್ನುವುದು ನಿಮಗೆ ಗೊತ್ತೆ? ಕೆಲವು ಜೀವಿಗಳ ಪ್ರಭೇದಗಳಿಗೆ ಮರಿಗಳನ್ನು ಬೆಳೆಸುವುದು ಎಂದರೆ ಪ್ರೀತಿ ಮತ್ತು ರಕ್ಷಣೆ ಮಾತ್ರವಲ್ಲ. ಅವು ಬದುಕುಳಿಯುವ ಪ್ರಮಾಣವನ್ನು ಹೆಚ್ಚಿಸಲು ತಮ್ಮ ಸ್ವಂತ ಸಂತತಿಯನ್ನು ತ್ಯಜಿಸುತ್ತವೆ, ನಿರ್ಲಕ್ಷಿಸುತ್ತವೆ ಅಥವಾ ಕೊಲ್ಲುತ್ತವೆ.
ಕೋಗಿಲೆ ಪಕ್ಷಿಗಳು
Photo Credit : Bird Count India
ಕೋಗಿಲೆಗಳು ಸಂತಾನೋತ್ಪತ್ತಿಗಾಗಿ ಪರಾವಲಂಬಿಗಳು. ಹೆಣ್ಣು ಪಕ್ಷಿಗಳು ಇತರ ಪಕ್ಷಿಗಳ ಗೂಡುಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಕಣ್ಮರೆಯಾಗುತ್ತವೆ. ಕೋಗಿಲೆ ಮರಿಗಳು ಮೊದಲು ಮೊಟ್ಟೆಯೊಡೆಯುತ್ತವೆ. ಪಾಲಕರ ನೈಜ ಮೊಟ್ಟೆಗಳನ್ನು ತನ್ನ ಬೆನ್ನಿನಿಂದ ದೂಡಿ ಕೆಳಗೆ ಹಾಕುತ್ತದೆ. ಬಾಡಿಗೆ ತಾಯಿ ಪಕ್ಷಿ ನೀಡುವ ಎಲ್ಲಾ ಆಹಾರವನ್ನು ತಾನೇ ತಿನ್ನುತ್ತದೆ. ಬಾಡಿಗೆ ತಾಯಿ-ತಾಯಂದಿರು ಅಂತಿಮವಾಗಿ ವಂಚಕ ಪಕ್ಷಿಗೇ ಆಹಾರ ನೀಡುತ್ತಾರೆ. ಕೋಗಿಲೆಗಳು 100ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಗುರಿಯಾಗಿಸುತ್ತವೆ. ಮೊಟ್ಟೆಯಿಟ್ಟ ನಂತರ ಆರೈಕೆ ಮಾಡದೆ ಕಣ್ಮರೆಯಾಗಿಬಿಡುತ್ತವೆ. ಮರಿಗಳು ಬಾಡಿಗೆ ತಾಯಿಯ ಪೋಷಣೆಯಲ್ಲಿ ಬದುಕುತ್ತವೆ.
ದೈತ್ಯ ಪಾಂಡಾಗಳು
PHOTO CREDIT : AP , PTI
ತಾಯಿ ಪಾಂಡ ಹೆಚ್ಚಾಗಿ ಅವಳಿ ಮರಿಗಳಿಗೆ ಜನ್ಮ ನೀಡುತ್ತದೆ. ತಕ್ಷಣವೇ ದುರ್ಬಲ ಮರಿಯನ್ನು ತ್ಯಜಿಸುತ್ತದೆ. ಬಲಿಷ್ಠ ಮರಿಗೆ ಮಾತ್ರ ಹಾಲು ನೀಡಿ ಪೋಷಿಸುತ್ತದೆ. ಅಮ್ಮನಿಂದ ತಿರಸ್ಕಾರಕ್ಕೆ ಒಳಗಾದ ಪಾಂಡಾಗಳು ಗಂಟೆಗಟ್ಟಲೆ ಹಸಿವಿನಿಂದ ಒದ್ದಾಡುತ್ತವೆ. ಕೆಲವೊಮ್ಮೆ ಮೃಗಾಲಯದ ಸಿಬ್ಬಂದಿಗಳು ಮರಿಗಳನ್ನು ಅದಲುಬದಲು ಮಾಡಿ ಎರಡಕ್ಕೂ ಆರೈಕೆ ಸಿಗುವಂತೆ ಮಾಡುತ್ತಾರೆ. ಗಂಡು ಪಾಂಡಾಗಳು ಆರೈಕೆಯಲ್ಲಿ ಭಾಗವಹಿಸುವುದಿಲ್ಲ.
ಸ್ಯಾಂಡ್ ಟೈಗರ್ ಶಾರ್ಕ್ಗಳು
Photo Credit : SHARK ACADEMY | Youtube
ಇವು ಶಾರ್ಕ್ ಜಾತಿಗೆ ಸೇರಿದ ಮೀನುಗಳು. ತಾಯಿ ಮೊಟ್ಟೆಯನ್ನು ಮರಿ ಮಾಡುತ್ತದೆ. ಆದರೆ ಬಲಿಷ್ಠ ಅಥವಾ ದೊಡ್ಡ ಮರಿಗಳು ತನ್ನದೇ ಸೋದರ-ಸೋದರಿಯರನ್ನು ನುಂಗುತ್ತವೆ ಮತ್ತು ಮೊಟ್ಟೆಗಳನ್ನೂ ನುಂಗುತ್ತವೆ. ಹೀಗಾಗಿ ಬಹುತೇಕ ಎರಡು ಮರಿಗಳು ಮಾತ್ರ ಉಳಿಯುತ್ತವೆ. ತಾಯಿ ಈ ಹೋರಾಟದ ನಡುವೆ ಪ್ರವೇಶಿಸುವುದಿಲ್ಲ. ಪ್ರತಿ 2 ವರ್ಷಕ್ಕೊಮ್ಮೆ ಮೊಟ್ಟೆ ಇಡುವ ತಾಯಿ ಈಜಲು ಸಿದ್ಧವಾದ ಮರಿಯನ್ನು ಮಾತ್ರ ಪೋಷಿಸುತ್ತದೆ.
ಮೀರ್ಕ್ಯಾಟ್ಗಳು
Photo Credit : NDTV
ಮೀರ್ಕ್ಯಾಟ್ ದಕ್ಷಿಣ ಆಫ್ರಿಕಾದ ಒಂದು ಬಗೆಯ ಮಂಗ. ಪ್ರಬಲ ಹೆಣ್ಣು ಮಂಗಗಳು ತಮ್ಮ ಸ್ವಂತ ಮರಿಗಳು ಸಮುದಾಯದ ಪಾಲನೆಯನ್ನು ಪ್ರಾಬಲ್ಯ ಸಾಧಿಸುವುದನ್ನು ಖಚಿತಪಡಿಸಲು ಅಧೀನವಾಗಿರುವ ಮಂಗಗಳ ಮರಿಗಳನ್ನು ನಿರ್ಮೂಲನೆ ಮಾಡುತ್ತವೆ. ಸಂತ್ರಸ್ತರ ತಾಯಂದಿರು ತಮ್ಮ ಸಂತತಿಯನ್ನೆಲ್ಲ ಕಳೆದುಕೊಳ್ಳುತ್ತವೆ. ಬದುಕುಳಿದ ಮರಿಗಳಿಗೆ ಪ್ರಬಲ ಹೆಣ್ಣು ಮಂಗಗಳು ಹಾಲುಣಿಸುತ್ತವೆ. ಹೀಗೆ ಸಮುದಾಯದ ಸ್ವೀಕಾರವನ್ನು ಗಳಿಸುತ್ತವೆ. ಶಿಶುಹತ್ಯೆಯಿಂದಾಗಿ ಪ್ರಬಲ ಹೆಣ್ಣು ಮಂಗಗಳು ಗುಂಪಿನ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ನಾಜ್ಕಾ ಬೂಬೀಗಳು
Photo Credit : Endemic Nazca Boobies of Galápagos | Youtube
ನಾಜ್ಕಾ ಬೂಬಿಗಳು ಪೂರ್ವ ಪೆಸಿಫಿಕ್ ಪ್ರದೇಶದಲ್ಲಿ ಕಂಡುಬರುವ ಒಂದು ರೀತಿಯ ಸಮುದ್ರ ಪಕ್ಷಿಗಳು. ಮೊದಲು ಮೊಟ್ಟೆಯೊಡೆದ ಪಕ್ಷಿಗಳು ತಮ್ಮ ಯುವ ಸೋದರ-ಸೋದರಿಯರನ್ನು ಕೊಲ್ಲುತ್ತವೆ ಅಥವಾ ಮೊಟ್ಟೆಗಳನ್ನು ಗೂಡಿನಿಂದ ಹೊರದೂಡುತ್ತವೆ. ಪೋಷಕ ಪಕ್ಷಿಗಳು ಸುಮ್ಮನೆ ನೋಡುತ್ತವೆ. ಕೆಲವೊಮ್ಮೆ ಪ್ರಬಲ ಪಕ್ಷಿಗಳ ಕೆಲಸಕ್ಕೆ ನೆರವಾಗುತ್ತವೆ. ಕಠಿಣ ಸಾಗರದ ಸಮುದಾಯಗಳ ನಡುವೆ ಪ್ರಬಲ ಪಕ್ಷಿಗಳಿಗೆ ಹೆಚ್ಚು ಸಂಪನ್ಮೂಲ ಸಿಕ್ಕು ಅದು ಬಲಿಷ್ಠವಾಗಿ ಬೆಳೆಯುವಂತೆ ಪೋಷಕರು ಖಾತರಿಪಡಿಸುತ್ತವೆ.
ಕೃಪೆ: indianexpress.com