ನಿಮ್ಮ ನಡಿಗೆ ಕೊಬ್ಬು ಕರಗಿಸುತ್ತಿದೆಯೆ? ತಿಳಿದುಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ | Photo Credit : freepik
ಸಕ್ರಿಯವಾಗಿರಲು ಇರುವ ಮೂಲಭೂತ ಆರೈಕೆ ನಡಿಗೆ ಎನ್ನುವ ಕಾರಣಕ್ಕೆ ಒಂದರ ಮೇಲೆ ಮತ್ತೊಂದು ಹೆಜ್ಜೆ ಇಡುವುದರಿಂದ ನೀವು ಕ್ಯಾಲರಿ ಕಡಿತಗೊಳಿಸಲು ಸಾಧ್ಯವಿಲ್ಲ!
ಜಡವಾಗಿ ಕುಳಿತ ಜೀವನಶೈಲಿಯಲ್ಲಿ ಸಕ್ರಿಯವಾಗಿರಲು ಮೂಲಭೂತ ವ್ಯಾಯಾಮವೆಂದರೆ ನಡಿಗೆ. ಗುರಿ ಇರಿಸಿರುವ ಸಂಖ್ಯೆಯ ಹೆಜ್ಜೆಗಳನ್ನು ಸಾಧಿಸುವುದು ಫಿಟ್ನೆಸ್ ಕಾಪಾಡುವ ಗುರಿಯಾಗಿರುತ್ತದೆ. ಆದರೆ ನಡಿಗೆಯಿಂದ ನೀವು ನಿಜವಾಗಿಯೂ ತೂಕ ಇಳಿಸಿಕೊಳ್ಳುತ್ತಿದ್ದೀರಾ? ಫಿಟ್ನೆಸ್ ತಜ್ಞರು ನಡಿಗೆ ಮುಖ್ಯವಾದ ವ್ಯಾಯಾಮವೆಂದು ಶಿಫಾರಸು ಮಾಡುತ್ತಾರೆ ಮತ್ತು ಸಕ್ರಿಯವಾಗಿರಲು ಇರುವ ಮೂಲಭೂತ ಆರೈಕೆ ನಡಿಗೆ ಎನ್ನುವ ಕಾರಣಕ್ಕೆ ಒಂದರ ಮೇಲೆ ಮತ್ತೊಂದು ಹೆಜ್ಜೆ ಇಡುವುದರಿಂದ ನೀವು ಕ್ಯಾಲರಿ ಕಡಿತಗೊಳಿಸಲು ಸಾಧ್ಯವಿಲ್ಲ!
ಫೆಬ್ರವರಿ 25ರ ಪೋಸ್ಟ್ನಲ್ಲಿ ಫಿಟ್ನೆಸ್ ತರಬೇತುದಾರ ಬಾಬಿ ಹೇಳಿರುವ ಪ್ರಕಾರ, ಬಹಳಷ್ಟು ಮಂದಿ ನಡಿಗೆಯಲ್ಲಿ ವೇಗ ಮತ್ತು ತೀವ್ರತೆಯನ್ನು ಕೈಬಿಟ್ಟು ನಡೆಯುವಾಗ ನಿಜವಾಗಿಯೂ ಕೊಬ್ಬನ್ನು ಕರಗಿಸುತ್ತಾರೆಯೇ ಎನ್ನುವ ಸಂಶಯ ಬರುತ್ತದೆ. ನಡಿಗೆಯಿಂದ ಕೊಬ್ಬನ್ನು ಕಳೆದುಕೊಳ್ಳುವ ವಿಷಯಕ್ಕೆ ಬಂದಾಗ ಜನರು ಮರೆತುಬಿಡುವ ಎರಡು ವಿಷಯಗಳಿವು.
https://www.instagram.com/reel/DVH3XgMjMDd/?utm_source=ig_web_copy_link
ನಡಿಗೆ ಮಾತ್ರದಿಂದ ಕೊಬ್ಬು ಏಕೆ ಕರಗುವುದಿಲ್ಲ?
ಬಾಬಿ ಅವರು ಹೇಳುವ ಪ್ರಕಾರ ನಡಿಗೆ ಮಾತ್ರ ಸಾಕಾಗುವುದಿಲ್ಲ. ಮುಖ್ಯವಾಗಿ ವೇಗ ಮುಖ್ಯವಾಗುತ್ತದೆ. “ಬಹಳಷ್ಟು ಮಂದಿ ನಿತ್ಯವೂ ನಡೆಯುತ್ತಾರೆ. ಆದರೆ ಕೊಬ್ಬು ಕರಗುವುದಿಲ್ಲ. ಏಕೆಂದರೆ ಅವರು ಬಹಳ ಮೆಲ್ಲಗೆ ನಡೆಯುತ್ತಾರೆ. ಹೃದಯದ ದರ ಏರಿಕೆಯಾಗುವುದಿಲ್ಲ. ಕೊಬ್ಬನ್ನು ಪರಿಣಾಮಕಾರಿಯಾಗಿ ಕರಗಿಸಲು ನೀವು ವಲಯ 2ಗೆ ಹೋಗಬೇಕು. ಅದೆಂದರೆ ಹೆಚ್ಚುವರಿ ಕೊಬ್ಬು ಕಳೆಯುವ ವಲಯ. ನಿಮ್ಮ ನಡಿಗೆ ಸರಳವಾದ ನಡಿಗೆಯಾಗಿದ್ದಲ್ಲಿ, ಹೃದಯದ ದರ ಕಡಿಮೆಯಾಗಿರುತ್ತದೆ. ಹೀಗಾಗಿ ಸಂಗ್ರಹಿತವಾಗಿರುವ ಕೊಬ್ಬನ್ನು ಕರಗಿಸಲು ನಿಮಗೆ ಸಾಧ್ಯವಾಗುವುದಿಲ್ಲ.”
ವಲಯ 2 ಎಂದರೇನು?
ವಲಯ 2ರಲ್ಲಿ ಕೊಬ್ಬು ಸಂಗ್ರಹವಾಗಿರುತ್ತದೆ. ಅದನ್ನು ತೆಗೆಯಲು ನಿಮ್ಮ ಹೃದಯದ ದರ ನಿರ್ದಿಷ್ಟ ಘಟ್ಟದಲ್ಲಿರುವಂತೆ ನೀವು ವೇಗದ ನಡಿಗೆ ನಡೆಯಬೇಕು. ಆದರೆ ಸುಮ್ಮನೆ ಅಡ್ಡಾಡಿದರೆ ಹೃದಯದ ದರ ಕೊಬ್ಬಿನ ವಲಯವನ್ನು ತೆಗೆಯುವಂತಹ ಮಟ್ಟಕ್ಕೆ ತಲುಪುವುದಿಲ್ಲ. ಬಹಳಷ್ಟು ಮಂದಿ ಹೆಜ್ಜೆಯ ಲೆಕ್ಕಾಚಾರವನ್ನು ಇಡುತ್ತಾರೆಯೇ ವಿನಾ ಹಾಕಿದ ಹೆಜ್ಜೆಯ ವೇಗವನ್ನು ಲೆಕ್ಕ ಹಾಕುವುದಿಲ್ಲ. ನಿಮ್ಮ ದೇಹಕ್ಕೆ ಬೆಚ್ಚನೆಯ ಅನುಭವವಾಗುವುದು ಅಥವಾ ಉಸಿರಾಟ ಭಾರವಾದಾಗ ನಿಜವಾಗಿಯೂ ಕೊಬ್ಬು ಕರಗಿಸುವ ವಲಯಕ್ಕೆ ಬಂದಿದ್ದೀರಿ ಎಂದು ಅರ್ಥ ಮಾಡಿಕೊಳ್ಳಬೇಕು.
ಕೊಬ್ಬು ಕರಗಿಸುವ ನಡಿಗೆ ಹೇಗಿರುತ್ತದೆ?
ನಿತ್ಯದ ಸಾಮಾನ್ಯ ನಡಿಗೆ ಮತ್ತು ಕೊಬ್ಬು ಕರಗಿಸುವ ನಡಿಗೆಯ ನಡುವೆ ವ್ಯತ್ಯಾಸವಿದೆ. ವೇಗದ ನಡಿಗೆಯ ನಡುವೆ ನೀವು ಮಾತನಾಡಬಹುದು ಆದರೆ ಹಾಡಲು ಸಾಧ್ಯವಾಗುವುದಿಲ್ಲ. ಅಂದರೆ ನಿಮ್ಮ ದೇಹಕ್ಕೆ ಬೆಚ್ಚನೆಯ ಅನುಭವವಾಗುವುದು ಅಥವಾ ಉಸಿರಾಟ ಭಾರವಾದಾಗ ನಿಜವಾಗಿಯೂ ಕೊಬ್ಬು ಕರಗಿಸುವ ವಲಯಕ್ಕೆ ಬಂದಿದ್ದೀರಿ. ಮಾತು ಮತ್ತು ಹಾಡು ನಡುವೆ ವ್ಯತ್ಯಾಸ ಮುಖ್ಯವಾಗುತ್ತದೆ.
ಶಿಫಾರಸು ಮಾಡಲಾಗಿರುವ ವೇಗವೆಷ್ಟು?
ಸರಾಸರಿ ವ್ಯಕ್ತಿಗೆ ಶಿಫಾರಸು ಮಾಡಿದ ವೇಗವು ಗಂಟೆಗೆ 2.8ರಿಂದ 3.8 ಮೈಲಿಯಷ್ಟಿರುತ್ತದೆ. ಆದರೆ ನಿಮ್ಮ ಹೃದಯದ ದರ ನಿಜವಾಗಿಯೂ ಸ್ಪಷ್ಟ ಸೂಚಕವಾಗಿರುತ್ತದೆ. ಸಾಮಾನ್ಯವಾಗಿ ನಡೆಯುವ ವೇಗಕ್ಕಿಂತ ಸ್ವಲ್ಪ ಹೆಚ್ಚು ವೇಗದಲ್ಲಿ ನಡೆದು ನೋಡಿದರೆ ನಿಮಗೆ ಸವಾಲು ಎದುರಾಗುವ ಅನುಭವವಾಗುತ್ತದೆ. ಅಂದರೆ ನೀವು ಸಾಮಾನ್ಯ ವೇಗದಲ್ಲಿ ನಡೆಯುತ್ತಿದ್ದರೆ ದೇಹವನ್ನು ಕೊಬ್ಬು ಕರಗಿಸುವ ವಲಯಕ್ಕೆ ತಂದಿಲ್ಲ ಎಂದುಕೊಳ್ಳಬೇಕು. ನಡಿಗೆಯಲ್ಲಿ ಸ್ವತಃ ಸವಾಲು ಎದುರಿಸಬೇಕು. ಉದ್ಯಾನವನದಲ್ಲಿ ನಿಧಾನವಾಗಿ ನಡೆದಲ್ಲಿ 10,000 ಹೆಜ್ಜೆ ಹಾಕಿದರೂ ಪ್ರಯೋಜನಕ್ಕೆ ಬಾರದು ಎನ್ನುತ್ತಾರೆ ಬಾಬಿ.