×
Ad

ಗರಿಷ್ಠ ಲಾಭಪಡೆಯಲು ಅಗಸೆಬೀಜಗಳನ್ನು ಸೇವಿಸುವುದು ಹೇಗೆ?

ಅಗಸೆ ಬೀಜಗಳು ಏಕೆ ಅಗತ್ಯ?

Update: 2026-03-02 13:19 IST

ಸಾಂದರ್ಭಿಕ ಚಿತ್ರ | Photo Credit : freepik

ಇಡೀ ಅಗಸೆಬೀಜಗಳು ಪೋಷಕಾಂಶಗಳನ್ನು ಬಿಡುಗಡೆ ಮಾಡದೆ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದು ಹೋಗುವುದರಿಂದ ಸೂಕ್ತ ಲಾಭ ಸಿಗುವುದಿಲ್ಲ. ಅವುಗಳ ಆರೋಗ್ಯ ಮೌಲ್ಯವನ್ನು ಹೆಚ್ಚಿಸಲು ಸರಿಯಾದ ಸೇವನೆಯ ವಿಧಾನಗಳನ್ನು ಕಲಿಯುವುದು ಮುಖ್ಯವಾಗುತ್ತದೆ.

ಫ್ಲ್ಯಾಕ್ಸ್ ಸೀಡ್ಸ್ ಅಥವಾ ಅಗಸೆ ಬೀಜಗಳು ಒಮೆಗಾ 3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಆಂಟಿ ಆಕ್ಸಿಡಂಡ್ಗಳಿಂದ ತುಂಬಿರುವ ಸಣ್ಣ ಪೌಷ್ಠಿಕಾಂಶದ ಶಕ್ತಿ ಕೇಂದ್ರಗಳಾಗಿವೆ. ಇದು ಹೃದಯದ ಆರೋಗ್ಯ, ಜೀರ್ಣಕ್ರಿಯೆ ಮತ್ತು ಹಾರ್ಮೋನ್ ಸಮತೋಲನವನ್ನು ಬೆಂಬಲಿಸುತ್ತದೆ. ಹಾಗಿದ್ದರೂ ಅವುಗಳನ್ನು ತಪ್ಪಾಗಿ ತಿನ್ನುವುದರಿಂದ ಅವುಗಳ ಪ್ರಯೋಜನ ಸಿಗದೆ ಇರಬಹುದು. ಇಡೀ ಅಗಸೆಬೀಜಗಳು ಪೋಷಕಾಂಶಗಳನ್ನು ಬಿಡುಗಡೆ ಮಾಡದೆ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದು ಹೋಗುವುದರಿಂದ ಸೂಕ್ತ ಲಾಭ ಸಿಗುವುದಿಲ್ಲ. ಅವುಗಳ ಆರೋಗ್ಯ ಮೌಲ್ಯವನ್ನು ಹೆಚ್ಚಿಸಲು ಸರಿಯಾದ ಸೇವನೆಯ ವಿಧಾನಗಳನ್ನು ಕಲಿಯುವುದು ಮುಖ್ಯವಾಗುತ್ತದೆ.

ಅಗಸೆ ಬೀಜಗಳು ಏಕೆ ಅಗತ್ಯ?

• ಅಗಸೆ ಬೀಜಗಳಲ್ಲಿ ಆಲ್ಫಾ-ಲಿನೊಲೆನಿಕ್ ಆಸಿಡ್ ಇರುತ್ತದೆ. ಇದು ಸಸ್ಯ ಆಧಾರಿತ ಒಮೆಗಾ- 3 ಕೊಬ್ಬು ಆಮ್ಲವಾಗಿದ್ದು, ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಬೆಂಬಲಿಸುತ್ತದೆ.

• ಆಹಾರದ ಫೈಬರ್ನಲ್ಲಿ ಸಮೃದ್ಧ: ಅಗಸೆ ಬೀಜಗಳು ಜೀರ್ಣಕ್ರಿಯೆಗೆ ನೆರವಾಗುತ್ತವೆ. ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ ಮತ್ತು ತೂಕ ನಿರ್ವಹಣೆಗೆ ಹೊಟ್ಟೆ ತುಂಬಿರುವ ಭಾವವನ್ನು ಉತ್ತೇಜಿಸುತ್ತದೆ.

• ಹಾರ್ಮೋನುಗಳನ್ನು ಸಮತೋಲನಗೊಳಿಸುವ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುವ ಲಿಗ್ನಾನ್ಗಳನ್ನು (ಆ್ಯ0ಟಿಆಕ್ಸಿಡಂಟ್ಗಳು) ಹೊಂದಿರುತ್ತದೆ.

ಇಡೀ ಅಗಸೆಬೀಜ ಮತ್ತು ಪುಡಿಮಾಡಿದವುಗಳ ವ್ಯತ್ಯಾಸ

• ಇಡೀ ಅಗಸೆಬೀಜಗಳ ಹೊರಗಿನ ಪದರ ಕಠಿಣವಾಗುವುದರಿಂದ ಜೀರ್ಣಕ್ರಿಯೆಯನ್ನು ತಡೆಯುತ್ತದೆ; ಹೀಗಾಗಿ ಪೌಷ್ಠಿಕಾಂಶಗಳು ಬಳಕೆಯಾಗದೆ ಹೋಗಬಹುದು.

• ಹುಡಿಮಾಡಿದ ಅಗಸೆಬೀಜಗಳಿಂದ ಪೋಷಕಾಂಶಗಳನ್ನು ದೇಹ ಸುಲಭವಾಗಿ ಹೀರಿಕೊಳ್ಳುತ್ತದೆ.

• ಬೀಜಗಳನ್ನು ಒಡೆಯಲು ಕಾಫಿ ಗ್ರೈಂಡರ್/ಆಹಾರ ಪ್ರೊಸೆಸರ್ ಬಳಸಬಹುದು.

• ಪುಡಿಮಾಡಿದ ಅಗಸೆಬೀಜಗಳನ್ನು ಗಾಳಿಯಾಡದಂತಹ ಪೊಟ್ಟಣದಲ್ಲಿ ಇಡಬೇಕು ಅಥವಾ ಫ್ರಿಜ್ನಲ್ಲಿ ಇಡಬೇಕು.

• ಅಗಸೆ ಬೀಜಗಳನ್ನು ರಾತ್ರಿಯಿಡೀ ನೀರಲ್ಲಿ ಹಾಕಿಟ್ಟು ಬೆಳಗ್ಗೆ ಸೇವಿಸಬಹುದು. ನೀರಿನಲ್ಲಿ ಬೆರೆಸಿದಾಗ ಜೆಲ್ ರೀತಿಯ ವಸ್ತು ಸೃಷ್ಟಿಯಾಗಿ ಜಠರದ ಆರೋಗ್ಯ ಮತ್ತು ಜಲಸಂಚಯನಕ್ಕೆ (ಹೈಡ್ರೀಕರಣ) ನೆರವಾಗುತ್ತದೆ.

ಎಷ್ಟು ಮತ್ತು ಹೇಗೆ ಸೇವಿಸಬೇಕು?

• ಸುರಕ್ಷಿತವಾಗಿ 1-2 ಚಮಚಗಳಷ್ಟೇ ನಿತ್ಯವೂ ಸೇವಿಸಬೇಕು.

• ನೀರಿನೊಂದಿಗೆ ಬೆಳಿಗ್ಗೆ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಮತ್ತು ಜೀರ್ಣಕ್ರಿಯೆಗೆ ನೆರವಾಗುತ್ತದೆ.

• ಊಟಕ್ಕೆ ಮೊದಲು ಒಂದು ಚಮಚ ಅಗಸೆ ಬೀಜ ಸೇವಿಸುವುದರಿಂದ ತೂಕ ನಿರ್ವಹಣೆ ಮತ್ತು ಹಸಿವನ್ನು ನಿಯಂತ್ರಿಸಲು ನೆರವಾಗುತ್ತದೆ.

ಬಳಸಬಹುದಾದ ಸರಳ ವಿಧಾನಗಳು

• ಸ್ಮೂದಿಗಳು: ತಕ್ಷಣದ ಪೌಷ್ಠಿಕಾಂಶಕ್ಕೆ ಪುಡಿ ಮಾಡಿದ ಅಗಸೆಬೀಜಗಳನ್ನು ಮಿಕ್ಸಿಗೆ ಹಾಕಿ ಸ್ಮೂದಿ ತಯಾರಿಸಿ.

• ಮಫಿನ್ಗಳು, ಪ್ಯಾನ್ಕೇಕ್ಗಳು ಮತ್ತು ಬ್ರೆಡ್ಗಳಲ್ಲಿ ಬಳಸಬಹುದು.

• ಮೊಟ್ಟೆಯ ಜೊತೆಗೆ ಬಳಸಬಹುದು.

• ಸಲಾಡ್ಗಳು, ಯೋಗರ್ಟ್ ಮತ್ತು ಓಟ್ಮೀಲ್ನಲ್ಲಿ ಬೆರೆಸಿ ಸೇವಿಸಿ

• ಅಗಸೆಬೀಜದ ಎಣ್ಣೆಯನ್ನು ಸಲಾಡ್ಗಳಿಗೆ ಮತ್ತು ಬೇಯಿಸಿದ ತರಕಾರಿಗಳಿಗೆ ಬೆರೆಸಬಹುದು.

• ಅತಿಯಾಗಿ ಬೇಯಿಸಿ ತಿನ್ನಬೇಡಿ.

ಅಂತಿಮವಾಗಿ ಹೇಳುವುದಾದರೆ, ನಿಮ್ಮ ಆಹಾರದಲ್ಲಿ ಅಗಸೆ ಬೀಜಗಳನ್ನು ಸೇರಿಸುವುದು ಸರಳ ಮತ್ತು ಪರಿಣಾಮಕಾರಿ. ಪುಡಿಮಾಡಿದ, ನೀರಿನಲ್ಲಿ ತೋಯಿಸಿದ ಅಥವಾ ಎಣ್ಣೆಯ ರೂಪದಲ್ಲಿ ಸೇವಿಸಬಹುದು. ಒಮೆಗಾ 3, ಫೈಬರ್, ಆಂಟಿ ಆಕ್ಸಿಡಂಟ್ಗಳು ಮತ್ತು ಹಾರ್ಮೋನ್ -ಸಮತೋಲನದ ತತ್ವಗಳು ಸಿಗುತ್ತವೆ. ಅವುಗಳನ್ನು ಸ್ಮೂತಿಗಳು, ಸುಟ್ಟ ಆಹಾರಗಳು ಅಥವಾ ಸಲಾಡ್ಗಳಲ್ಲಿ ಬಳಸಿದಲ್ಲಿ ಪೋಷಕಾಂಶ ಮತ್ತು ಒಟ್ಟು ಆರೋಗ್ಯಕ್ಕೆ ನೆರವಾಗುತ್ತದೆ.

ಕೃಪೆ: NDTV

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News