×
Ad

ಹೃದ್ರೋಗ ಸಂಬಂಧಿ ಸಾವಿನ ಪ್ರಮಾಣ 2050ರ ವೇಳೆಗೆ 4.7 ಪಟ್ಟು ಅಧಿಕ: ವರದಿ

Update: 2023-11-15 07:43 IST

Photo: freepik

ಹೊಸದಿಲ್ಲಿ: ಈ ಶತಮಾನದ ಮಧ್ಯದ ವೇಳೆಗೆ ವಿಶ್ವದಲ್ಲಿ ಹೃದಯ ರೋಗ ಸಂಬಂಧಿ ಸಾವಿನ ಸಂಖ್ಯೆ 4.7 ಪಟ್ಟು ಹೆಚ್ಚಲಿದೆ ಎಂದು ಲ್ಯಾನ್ಸೆಟ್ ಅಂದಾಜಿಸಿದೆ.

ಲ್ಯಾನ್ಸೆಟ್ ವರದಿಯ ಪ್ರಕಾರ, 2022ರಲ್ಲಿ ವಿಶ್ವದ ಜನತೆ ಹೃದಯ ಕಾಯಿಲೆಗಳಿಗೆ ಕಾರಣವಾಬಹುದಾದಷ್ಟು ಹೆಚ್ಚಿನ ಪ್ರಮಾಣದ ತಾಪಮಾನವನ್ನು 86 ದಿನಗಳ ಕಾಲ ಅನುಭವಿಸಿದ್ದಾರೆ. ಈ ಪೈಕಿ ಶೇಕಡ 60ರಷ್ಟು ಮನುಷ್ಯ ಪರಿಣಾಮದ ಹವಾಮಾನ ಬದಲಾವಣೆ ಕಾರಣದಿಂದ ಸಂಭವಿಸಿದೆ.

"ಆರೋಗ್ಯ ಕಾರಣಗಳನ್ನು ವಿಶ್ಲೇಷಿಸಿದಾಗ, ಅಪಾಯಕಾರಿಯಾಗಿ ಬೆಳೆಯುತ್ತಿರುವ ಹವಾಮಾನ ಬದಲಾವಣೆಯು ವಿಶ್ವಾದ್ಯಂತ ಇಂದು ಜೀವ ಮತ್ತು ಜೀವನಾಧಾರಕ್ಕೆ ಅಪಾಯಕಾರಿಯಾಗುತ್ತಿದೆ. 2 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಹೆಚ್ಚಳವು ಭಯಾನಕ ಭವಿಷ್ಯವನ್ನು ಸೂಚಿಸುತ್ತದೆ. ಜತೆಗೆ ಇದರ ಪರಿಹಾರಕ್ಕೆ ಕೈಗೊಳ್ಳುತ್ತಿರುವ ಕ್ರಮಗಳ ವೇಗ ಮತ್ತು ಪ್ರಮಾಣ, ಜನರೋಗ್ಯ ಮತ್ತು ಸುರಕ್ಷತೆಗೆ ಅಸಮರ್ಪಕ ಎನ್ನುವ ವಿಷಾದನೀಯ ಚಿತ್ರಣ ಕಂಡುಬರುತ್ತದೆ" ಎಂದು ಲಂಡನ್ ಯುನಿವರ್ಸಿಟಿ ಕಾಲೇಜಿನ ಲ್ಯಾನ್ಸೆಟ್ ಕೌಂಟ್ ಡೌನ್ ಕಾರ್ಯನಿರ್ವಾಹಕ ನಿರ್ದೇಶಕರಾದ ಮರೀನಾ ರೊಮಾನೆಲ್ಲೊ ಹೇಳಿದ್ದಾರೆ.

"ವಿಶ್ವಾದ್ಯಂತ ಪ್ರತಿ ಸೆಕೆಂಡ್ ಗೆ 1337 ಟನ್ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಗುತ್ತಿದೆ. ಭವಿಷ್ಯದಲ್ಲಿ ಇದನ್ನು ಕಡಿಮೆ ಮಾಡಲು ಸಾಧ್ಯವಾದರೆ ಮಾತ್ರವೆ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಅಪಾಯಕಾರಿ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯ ಎಂದು ಎಚ್ಚರಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News