×
Ad

ಐಎಫ್ಎ ಶೀಲ್ಡ್ ಫೈನಲ್: ಈಸ್ಟ್ ಬೆಂಗಾಲ್ ತಂಡವನ್ನು ನಾಟಕೀಯ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿದ ಮೋಹನ್ ಬಗಾನ್

Update: 2025-10-19 08:52 IST

PC: x.com/airnewsalerts

ಕೊಲ್ಕತ್ತಾ: ಐಎಫ್ಎ ಶೀಲ್ಡ್-2025 ಫುಟ್ಬಾಲ್ ಟೂರ್ನಿಯ ಫೈನಲ್ ನಲ್ಲಿ ಶನಿವಾರ ಈಸ್ಟ್ ಬೆಂಗಾಲ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕವಾಗಿ 5-4 ಗೋಲುಗಳಿಂದ ಸೋಲಿಸಿದ ಮೊಹುನ್ ಬಾಗನ್ ತಂಡ ಪ್ರಶಸ್ತಿ ಗೆದ್ದಿದೆ. ಇದರೊಂದಿಗೆ 2003ರಲ್ಲಿ ಪ್ರಶಸ್ತಿ ಗೆದ್ದ ಬಳಿಕ 22 ವರ್ಷಗಳ ಸುಧೀರ್ಘ ಕಾಯುವಿಕೆ ಮುಗಿದಿದ್ದು, ಮೊಹುನ್ ಬಾಗನ್ ಟ್ರೋಫಿ ಎತ್ತಿಹಿಡಿದಿದೆ.

ಹೆಚ್ಚುವರಿ ಅವಧಿಯ ಬಳಿಕ 1-1ರಲ್ಲಿ ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲಿ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಗೆ ಮೊರೆ ಹೋಗಲಾಗಿತ್ತು. ಮೊರಾಕ್ಕೊದ ಫಾರ್ವರ್ಡ್ ಆಟಗಾರ ಹಮೀದ್ ಅಹ್ಮದ್ ಅವರು 37ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದ ಈಸ್ಟ್ ಬೆಂಗಾಲ್ ಮುನ್ನಡೆ ಪಡೆಯಿತು. ಆದರೆ ಮೊಹುನ್ ಬಾಗನ್ ತಂಡದ ಮಿಡ್ ಫೀಲ್ಡರ್ ಅಪೂಯಾ ಅರ್ಧದ ಅವಧಿಯಲ್ಲಿಅದ್ಭುತ ಗೋಲು ಸಾಧಿಸಿ ಸಮಬಲಕ್ಕೆ ಕಾರಣರಾದರು.

ನಿರ್ಬಂಧಿತ ಅವಧಿಯಲ್ಲಿ ಮೊಹುನ್ ಬಾಗನ್ ತಂಡದ ಸ್ಟ್ರೈಕರ್ ಜಾನ್ಸನ್ ಕಮಿಂಗ್ಸ್ ಪೆನಾಲ್ಟಿ ತಪ್ಪಿಸಿಕೊಂಡರು. ಆದರೆ ಅವರ ತಂಡ, ಎದುರಾಳಿ ತಂಡದ ಗೋಲ್ ಕೀಪರ್ ಬದಲಾದರೂ ತಲೆ ಕೆಡೆಸಿಕೊಳ್ಳದೇ ವಿಜಯದ ನಗೆ ಬೀರಿತು.

ಇದು ಮೊಹುನ್ ಬಾಗನ್ 22 ವರ್ಷಗಳ ಕಾಯುವಿಕೆ ಬಳಿಕ ತಂಡಕ್ಕೆ ದಕ್ಕಿದ 21ನೇ ಐಎಫ್ಎ ಶೀಲ್ಡ್ ಆಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News