×
Ad

ಉಕ್ರೇನ್: ರಶ್ಯದ ವೈಮಾನಿಕ ದಾಳಿಯಲ್ಲಿ ಕನಿಷ್ಟ 16 ಮಂದಿ ಮೃತ್ಯು

Update: 2023-09-06 22:55 IST

ಸಾಂದರ್ಭಿಕ ಚಿತ್ರ

ಕೀವ್: ಪೂರ್ವ ಉಕ್ರೇನ್‍ನ ಕೊಸ್ತಿಯಾಂಟಿನಿವ್ಕ ನಗರದ ಮೇಲೆ ರಶ್ಯ ನಡೆಸಿದ ವೈಮಾನಿಕ ದಾಳಿಯಲ್ಲಿ ಮಗು ಸೇರಿದಂತೆ ಕನಿಷ್ಟ 16 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ಉಕ್ರೇನ್ ಸೇನಾಧಿಕಾರಿಗಳು ಬುಧವಾರ ಹೇಳಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಉಕ್ರೇನ್‍ಗೆ ಭೇಟಿ ನೀಡಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ದಾಳಿಯನ್ನು ಖಂಡಿಸಿದ್ದು ` ಈ ರಶ್ಯದ ದುಷ್ಟತವನ್ನು ಆದಷ್ಟು ಬೇಗ ಸೋಲಿಸಬೇಕು. ವೈಮಾನಿಕ ದಾಳಿಯಲ್ಲಿ ಒಂದು ಮಾರುಕಟ್ಟೆ, ಅಂಗಡಿ, ಔಷಧದ ಮಳಿಗೆಗೆ ಹಾನಿಯಾಗಿದೆ' ಎಂದಿದ್ದಾರೆ.

ಕನಿಷ್ಟ 16 ಮಂದಿ ಮೃತಪಟ್ಟಿರುವ ಜತೆಗೆ, ಇತರ 28 ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವ ಇಹೊರ್ ಕ್ಲಿಮೆಂಕೊ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News