×
Ad

ಬ್ಯಾಂಕಾಕ್‌ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: 6 ಮಂದಿ ಬಲಿ

Update: 2025-07-28 13:35 IST

ಸಾಂದರ್ಭಿಕ ಚಿತ್ರ (PTI)

ಬ್ಯಾಂಕಾಕ್: ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಸೋಮವಾರ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕನಿಷ್ಠ ಆರು ಮಂದಿ ಬಲಿಯಾಗಿದ್ದಾರೆ. ಈ ದಾಳಿ ಥೈಲ್ಯಾಂಡ್ ರಾಜಧಾನಿಯ ಓರ್ ಟು ಕೋ ಮಾರುಕಟ್ಟೆಯಲ್ಲಿ ನಡೆದಿದೆ.

ಈ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳು ಮತ್ತು ಸ್ಥಳೀಯ ಆಹಾರವನ್ನು ಪ್ರಮುಖವಾಗಿ ಮಾರಾಟ ಮಾಡಲಾಗುತ್ತಿತ್ತು. ಮೃತರಲ್ಲಿ ದಾಳಿ ನಡೆಸಿದ ಬಂದೂಕುಧಾರಿಯೂ ಸೇರಿದ್ದಾರೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಬ್ಯೂರೋದ ಉಪ ಆಯುಕ್ತ ಚಾರಿನ್ ಗೋಪಟ್ಟಾ ತಿಳಿಸಿದ್ದಾರೆ. ಬಂದೂಕುಧಾರಿ ದಾಳಿಯ ನಂತರ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಘಟನೆ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಎರಾವಾನ್ ತುರ್ತು ವೈದ್ಯಕೀಯ ಸೇವೆಯ ಪ್ರಕಾರ, ಮೃತರಲ್ಲಿ ನಾಲ್ವರು ಮಾರುಕಟ್ಟೆಯ ಭದ್ರತಾ ಸಿಬ್ಬಂದಿ ಮತ್ತು ಒಬ್ಬ ಮಹಿಳೆ ಸೇರಿದ್ದಾರೆ. ಈ ದಾಳಿ ಬೆಳಿಗ್ಗೆ ನಡೆಯಿದ್ದು, ಸ್ಥಳೀಯ ವ್ಯಾಪಾರಸ್ಥರು ಹಾಗೂ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News