ಸೌದಿ ಗಡಿಯಲ್ಲಿ ಹೌದಿಗಳ ದಾಳಿಯಲ್ಲಿ 11 ನಾಗರಿಕರಿಗೆ ಗಾಯ: ವರದಿ

Update: 2026-08-07 21:57 IST

Photo Credit : PTI 

ರಿಯಾದ್, ಆ.7: ಯೆಮನ್ ಗಡಿಯ ಸಮೀಪವಿರುವ ಸೌದಿ ಅರೇಬಿಯಾದ ದಕ್ಷಿಣ ಪ್ರದೇಶವಾದ ನಜ್ರಾನ್‍ನಲ್ಲಿ ಗುರುವಾರ ತಡರಾತ್ರಿ ಯೆಮನ್‍ನ ಹೌದಿ ಬಂಡುಕೋರರು ನಡೆಸಿದ ಸರಣಿ ದಾಳಿಯಲ್ಲಿ 4 ವರ್ಷದ ಮಗು ಸೇರಿದಂತೆ 11ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ.

ಮಧ್ಯ ಮತ್ತು ಪೂರ್ವ ಯೆಮನ್‍ನಲ್ಲಿ ಕನಿಷ್ಠ 30 ಸರಕಾರಿ ಪಡೆಗಳ ಯೋಧರನ್ನು ಕೊಂದ ಹಾಗೂ ಕನಿಷ್ಠ 50 ಜನರನ್ನು ಗಾಯಗೊಳಿಸಿದ ಮತ್ತೊಂದು ದಾಳಿಯ ಹೊಣೆಗಾರಿಕೆಯನ್ನು ಇರಾನ್ ಬೆಂಬಲಿತ ಬಂಡುಕೋರರು ವಹಿಸಿಕೊಂಡ ಕೆಲವು ಗಂಟೆಗಳ ನಂತರ ಈ ದಾಳಿ ನಡೆದಿದೆ ಎಂದು ಸೌದಿ ಅರೆಬಿಯದ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ದಾಳಿಯಲ್ಲಿ ಏಳು ಸೌದಿ ಪ್ರಜೆಗಳು, ಇಬ್ಬರು ಈಜಿಪ್ಟ್ ಪ್ರಜೆಗಳು, ಒಬ್ಬ ಯೆಮನ್ ಹಾಗೂ ಒಬ್ಬ ಪಾಕಿಸ್ತಾನಿ ಪ್ರಜೆ ಗಾಯಗೊಂಡಿದ್ದಾರೆ. ಬಂಡುಕೋರರು ನಾಗರಿಕರನ್ನು ಗುರಿಯಾಗಿಸಿಕೊಂಡು ಬೇಕಾಬಿಟ್ಟಿ ಶೆಲ್ ದಾಳಿ ನಡೆಸುತ್ತಿದ್ದಾರೆ ಎಂದು ಯೆಮನ್ ಸರಕಾರದ ಪರವಾಗಿ ಹೌದಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ವಕ್ತಾರ ಜನರಲ್ ಅಲ್-ಮಲಿಕಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News