ಜನ್ಮಸಿದ್ದ ಪೌರತ್ವವನ್ನು ನಿಯಂತ್ರಿಸಲು ಹೊಸ ಆದೇಶಗಳಿಗೆ ಟ್ರಂಪ್ ಸಹಿ
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಆ.7: ಜನ್ಮಸಿದ್ದ ಪೌರತ್ವಕ್ಕೆ ಸಂಬಂಧಿಸಿದಂತೆ ಅಮೆರಿಕ ಸುಪ್ರೀಂಕೋರ್ಟ್ ತಮ್ಮ ನಿರ್ದೇಶನವನ್ನು ವಜಾಗೊಳಿಸಿದ ಕೆಲವು ವಾರಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು `ಬರ್ತ್ ಟೂರಿಸಂ' ನಿಯಂತ್ರಿಸಲು ಮತ್ತು ಜನ್ಮಸಿದ್ದ ಪೌರತ್ವಕ್ಕೆ ಅರ್ಹರಾಗುವ ಜನರ ಸಂಖ್ಯೆಯನ್ನು ಪರಿಮಿತಗೊಳಿಸಲು ಎರಡು ನೂತನ ಕಾರ್ಯಾಂಗ ಆದೇಶಗಳಿಗೆ ಸಹಿ ಹಾಕಿದ್ದಾರೆ.
ಟ್ರಂಪ್ ಸಹಿ ಹಾಕಿದ ಒಂದು ಆದೇಶವು, ವಾಣಿಜ್ಯ ಉದ್ದೇಶದ `ಬರ್ತ್ ಟೂರಿಸಂ'ನಲ್ಲಿ ತೊಡಗಿಕೊಳ್ಳುವ ಜನರನ್ನು ಗುರಿಯಾಗಿಸಿಕೊಂಡಿದ್ದು, ಅವರಿಗೆ ದೇಶ ಪ್ರವೇಶಿಸುವುದನ್ನು ನಿರಾಕರಿಸುವ ಉದ್ದೇಶ ಹೊಂದಿದೆ. ಮತ್ತೊಂದು ಆದೇಶವು ಜನ್ಮಸಿದ್ದ ಪೌರತ್ವಕ್ಕೆ ಅನರ್ಹರೆಂದು ಪರಿಗಣಿಸಲಾಗುವ ಜನರ ವ್ಯಾಖ್ಯಾನವನ್ನು ವಿಸ್ತರಿಸುತ್ತದೆ. ಜನ್ಮಸಿದ್ದ ಪೌರತ್ವವನ್ನು ಕೊನೆಗೊಳಿಸಲು ಯತ್ನಿಸಿದ ಟ್ರಂಪ್ ಅವರ ಕಾರ್ಯಾಂಗ ಆದೇಶವನ್ನು ಜೂನ್ 30 ರಂದು ಅಮೆರಿಕದ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.
ಟ್ರಂಪ್ ಸಹಿ ಮಾಡಿದ ಹೊಸ ಕಾರ್ಯಾಂಗ ಆದೇಶಗಳು ಅಸಂವಿಧಾನಿಕ ಎಂದು ವಲಸೆ ತಜ್ಞರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.