ಅಮೆರಿಕ | ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿಯ ಮೃತದೇಹ ಪತ್ತೆ

Update: 2026-08-07 21:20 IST

 ವಿಕ್ರಮ್ ಮುಬಾಯಿ | Photo Credit :  NDTV  

ವಾಶಿಂಗ್ಟನ್, ಆ.7: ಕ್ಯಾಲಿಫೋರ್ನಿಯಾದ ಬಿಗ್ ಪೈನ್‍ಲೇಕ್ಸ್ ಪ್ರದೇಶದಲ್ಲಿ ವಾರಾಂತ್ಯದಲ್ಲಿ ಏಕಾಂಗಿಯಾಗಿ ಚಾರಣಕ್ಕೆ ತೆರಳಿದ್ದಾಗ ನಾಪತ್ತೆಯಾಗಿದ್ದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ವಿವಿಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪಿಎಚ್‍ಡಿ ವಿದ್ಯಾರ್ಥಿ ವಿಕ್ರಮ್ ಮುಬಾಯಿ ಅವರ ಮೃತದೇಹ `ಇನ್ಯೋ ನ್ಯಾಷನಲ್ ಫಾರೆಸ್ಟ್'ನಲ್ಲಿ ಪತ್ತೆಯಾಗಿದೆ. ವಿಕ್ರಮ್ ಆಗಸ್ಟ್ 1 ರಂದು ರಾತ್ರಿ ಸುಮಾರು 8:30ಕ್ಕೆ ಕೊನೆಯದಾಗಿ ತಮ್ಮ ಕುಟುಂಬವನ್ನು ಸಂಪರ್ಕಿಸಿದ್ದರು. ನಿಗದಿತ ಸಮಯಕ್ಕೆ ಅವರು ಹಿಂತಿರುಗದಿದ್ದಾಗ ಕುಟುಂಬದವರು ಅವರು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು ಎಂದು `ಡೈಲಿ ನೆಕ್ಸಸ್' ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News