×
Ad

ಆಕಸ್ಮಿಕವಾಗಿ ಮಗಳ ಮೇಲೆಯೇ ಕಾರು ಹರಿಸಿದ ತಾಯಿ: ಮಗು ಮೃತ್ಯು

Update: 2023-07-10 12:10 IST

Photo credit : gofundme.com

ಅರಿಝೋನಾ: ತಾಯಿಯೊಬ್ಬಳು ಆಕಸ್ಮಿಕವಾಗಿ ಕಾರನ್ನು ತನ್ನ ಪುತ್ರಿಯ ಮೇಲೆ ಹರಿಸಿದ್ದರಿಂದ 13 ತಿಂಗಳ ಮಗು ಮೃತಪಟ್ಟಿರುವ ಘಟನೆ ಅಮೆರಿಕಾದ ಅರಿಝೋನಾ ರಾಜ್ಯದಲ್ಲಿ ನಡೆದಿದೆ ಎಂದು NBC News ವರದಿ ಮಾಡಿದೆ. ಈ ಘಟನೆಯು ಕಾಟನ್‌ವುಡ್‌ನಲ್ಲಿರುವ ಬಾಲಕಿಯ ಕುಟುಂಬದ ನಿವಾಸದಲ್ಲಿ ಗುರುವಾರ ನಡೆದಿದೆ. ಮೃತಪಟ್ಟಿರುವ ಬಾಲಕಿಯನ್ನು ಹದಿಮೂರು ವರ್ಷದ ಸೈರಾ ರೋಸ್ ಥೋಮಿಂಗ್ ಎಂದು ಗುರುತಿಸಲಾಗಿದೆ.

"ನಾನು ನನ್ನ ಹದಿಮೂರು ವರ್ಷದ ಪುತ್ರಿಯ ಮೇಲೆ ಕಾರು ಹರಿಸಿದ್ದೇನೆ" ಎಂದು ಜುಲೈ 6ರಂದು ಯವಾಪೈ ಕೌಂಟಿ ಶೆರೀಫ್ ಕಚೇರಿಗೆ ಮಹಿಳೆಯೊಬ್ಬಳು ಕರೆ ಮಾಡಿ ಮಾಹಿತಿ ನೀಡಿದ್ದಾಳೆ.

ಈ ಕುರಿತು ಬಿಡುಗಡೆಯಾಗಿರುವ ಪತ್ರಿಕಾ ಪ್ರಕಟಣೆಯಲ್ಲಿ, ಜಾಫ್ರಿಯಾ ಥಾರ್ನ್‌ಬರ್ಗ್ ಎಂಬ ಮಹಿಳೆಯು ತನ್ನ ಕಾರನ್ನು ನಿವಾಸದ ಪಕ್ಕದಲ್ಲಿರುವ ನಿಲುಗಡೆ ತಾಣದಲ್ಲಿ ನಿಲ್ಲಿಸಿದ್ದಳು ಹಾಗೂ ತೀರಾ ಇಕ್ಕಟ್ಟಾಗಿದ್ದ ಆ ಜಾಗದಿಂದ ಕಾರನ್ನು ತನ್ನ ನಿವಾಸದಿಂದ ಹೊರ ತೆಗೆಯಲು ಪ್ರಯತ್ನಿಸುತ್ತಿದ್ದಳು ಎಂದು ಹೇಳಲಾಗಿದೆ. ನಾನು ನನ್ನ ಪುತ್ರಿಯನ್ನು ಕಾರಿನಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಆಕೆಯನ್ನು ಕಾರಿನ ಆಸನದಲ್ಲಿ ಕುಳ್ಳರಿಸಿದ್ದೇನೆ ಎಂದು ಭಾವಿಸಿದ್ದೆ ಎಂದು ಆ ಮಹಿಳೆಯು ಪೊಲೀಸರಿಗೆ ತಿಳಿಸಿದ್ದಾಳೆ.

ಯವಾಪೈ ಕೌಂಟಿ ಶೆರೀಫ್ ಅಧಿಕಾರಿಗಳು ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದಾಗ, ವೈದ್ಯಕೀಯ ಸಿಬ್ಬಂದಿಗಳು ಆ ಬಾಲಕಿಯ ಜೀವವುಳಿಸುವ ಕ್ರಮಗಳನ್ನು ಕೈಗೊಂಡಿದ್ದರು. ಆದರೆ, ಅವರ  ಪ್ರಯತ್ನದ ಹೊರತಾಗಿಯೂ ಆ ಬಾಲಕಿಯು ಮೃತಪಟ್ಟಿದ್ದಾಳೆ ಎಂದು ವೆರ್ದೆ ವ್ಯಾಲಿ ವೈದ್ಯಕೀಯ ಕೇಂದ್ರದಲ್ಲಿ ಘೋಷಿಸಲಾಯಿತು" ಎಂದು ಶೆರೀಫ್ ಕಚೇರಿಯು ತಿಳಿಸಿದೆ.

ಯವಾಪೈ ಕೌಂಟಿ ಶೆರೀಫ್ ಕಚೇರಿಯ ಅಪರಾಧ ತನಿಖಾ ದಳವು ಈ ಘಟನೆಯ ಕುರಿತು ತನಿಖೆ ಕೈಗೊಂಡಿದೆ. ಆದರೆ, ಈವರೆಗೆ ಬಾಲಕಿಯ ಮರಣಕ್ಕಾಗಿ ಆಕೆಯ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದೇ ಎಂಬುದು ಸ್ಪಷ್ಟವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News