×
Ad

ಗಾಝಾದಲ್ಲಿ 14,000 ಶಿಶುಗಳು ಪ್ರಾಣಾಪಾಯದ ಭೀತಿಯಲ್ಲಿದೆ : ವಿಶ್ವಸಂಸ್ಥೆ ಎಚ್ಚರಿಕೆ

Update: 2025-05-21 10:57 IST
ಸಾಂದರ್ಭಿಕ ಚಿತ್ರ | Reuters

ಹೊಸದಿಲ್ಲಿ : ಇಸ್ರೇಲ್ ಪಡೆಗಳು ಗಾಝಾದ ಮೇಲೆ ಬಾಂಬ್ ದಾಳಿಯನ್ನು ಮುಂದುವರಿಸಿದೆ. ರಾತ್ರಿಯಿಡೀ ನಡೆದ ದಾಳಿಗಳಲ್ಲಿ ಕನಿಷ್ಠ 24 ಜನರು ಮೃತಪಟ್ಟಿದ್ದಾರೆ. ಯುದ್ಧಪೀಡಿತ ಪ್ರದೇಶಕ್ಕೆ ಹೆಚ್ಚಿನ ನೆರವು ತಲುಪದಿದ್ದರೆ 48 ಗಂಟೆಗಳಲ್ಲಿ ಗಾಝಾದಲ್ಲಿ 14,000 ಶಿಶುಗಳು ಪ್ರಾಣವನ್ನು ಕಳೆದುಕೊಳ್ಳಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಗಾಝಾಕ್ಕೆ ಆಹಾರ, ಔಷಧಿ ಸೇರಿದಂತೆ ಅಗತ್ಯವಸ್ತುಗಳ ನೆರವು ರವಾನೆಯಾಗದಂತೆ ಇಸ್ರೇಲ್ ಸಂಪೂರ್ಣವಾಗಿ ದಿಗ್ಬಂಧನಗೊಳಿಸಿದೆ. 11 ವಾರಗಳ ನಂತರ ಇಸ್ರೇಲ್ ಅಧಿಕಾರಿಗಳು ಫೆಲೆಸ್ತೀನ್ ಪ್ರದೇಶಕ್ಕೆ ಸೀಮಿತ ನೆರವು ಮಾತ್ರ ಪ್ರವೇಶಿಸಲು ಅವಕಾಶ ನೀಡುತ್ತಿದ್ದಾರೆ. ಅಮೆರಿಕ, ಕೆನಡಾ, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ಮಿತ್ರರಾಷ್ಟ್ರಗಳ ಒತ್ತಡದ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ʼಶಿಶುಗಳಿಗೆ ಆಹಾರ ಸೇರಿದಂತೆ ನೆರವು ಸಾಗಿಸುವ ಕೇವಲ ಐದು ಟ್ರಕ್‌ಗಳು ಸೋಮವಾರ ಗಾಝಾವನ್ನು ಪ್ರವೇಶಿಸಿದೆ. ಅಗತ್ಯವಿರುವವರಿಗೆ ನೆರವು ಇನ್ನೂ ತಲುಪಿಲ್ಲ. ಮುಂದಿನ 48 ಗಂಟೆಗಳಲ್ಲಿ 14,000 ಶಿಶುಗಳ ಪ್ರಾಣಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಕಾರಣ ತಮ್ಮ ಮಕ್ಕಳಿಗೆ ಆಹಾರವನ್ನು ನೀಡಲು ಸಾಧ್ಯವಾಗದ ತಾಯಂದಿರಿಗೆ ಆ ಮಗುವಿಗೆ ಬೇಕಾದ ಆಹಾರವನ್ನು ತಲುಪಿಸಲು ನಾವು ಅಪಾಯಗಳನ್ನು ಎದುರಿಸುತ್ತಿದ್ದೇವೆʼ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಟಾಮ್ ಫ್ಲೆಚರ್ ಹೇಳಿದರು.

ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಯುದ್ಧದಲ್ಲಿ ಈವರೆಗೆ 53,573 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. 1,21,688 ಜನರು ಗಾಯಗೊಂಡಿದ್ದಾರೆ. ಸರಕಾರಿ ಮಾಧ್ಯಮಗಳ ಪ್ರಕಾರ, ಮೃತರ ಸಂಖ್ಯೆ 61,700ಕ್ಕೂ ಅಧಿಕವಾಗಿದೆ. ಅವಶೇಷಗಳ ಅಡಿಯಲ್ಲಿ ಸಾವಿರಾರು ಜನರು ನಾಪತ್ತೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News