Photo Credit : AP 

ಜಿನೀವಾ: ಇರಾನ್ ಬೆಂಬಲಿತ ಹೌದಿ ಪಡೆಗಳು ಮತ್ತು ಯಮನ್ ಸರಕಾರಿ ಪಡೆಗಳ ನಡುವೆ ಕಾಳಗ ಮುಂದುವರಿದಿದ್ದು, ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 26 ರ ಅವಧಿಯಲ್ಲಿ ಯಮನ್‍ನಲ್ಲಿ 164 ಸಾವುಗಳು ವರದಿಯಾಗಿದ್ದು 645 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ಮಾಹಿತಿ ನೀಡಿದೆ.

ಈ ಹಿಂಸಾಚಾರದಿಂದಾಗಿ 1,80,000ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಆಗಸ್ಟ್ 6 ರಿಂದ ಯಮನ್‍ನಲ್ಲಿ 838 ಮಂದಿ ಹತರಾಗಿದ್ದು 3,643 ಜನರು ಗಾಯಗೊಂಡಿದ್ದಾರೆ ಎಂದು ಡಬ್ಲ್ಯೂಎಚ್‍ಒ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor