ಡೊನಾಲ್ಡ್ ಟ್ರಂಪ್ | Photo Credit : PTI 

ವಾಶಿಂಗ್ಟನ್: ಇರಾನ್ ಜೊತೆಗಿನ ಸಂಘರ್ಷವನ್ನು ಬಹಳ ಶೀಘ್ರದಲ್ಲೇ ಗೆಲ್ಲಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ಅಮೆರಿಕದ ಮಧ್ಯಂತರ ಚುನಾವಣೆಗೂ ಮುನ್ನ ಮತ್ತೆ ಮಿಲಿಟರಿ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ.

ಈ ಸಂಘರ್ಷ ಅಂತ್ಯಗೊಂಡರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿಯಲಿದೆ. ಇರಾನ್ ಅಣ್ವಸ್ತ್ರ ಹೊಂದುವುದನ್ನು ತಡೆಯುವುದೇ ಅಮೆರಿಕದ ಮುಖ್ಯ ಉದ್ದೇಶವಾಗಿದೆ ಎಂದು ರವಿವಾರ `ಫಾಕ್ಸ್ ನ್ಯೂಸ್' ಜೊತೆ ಮಾತನಾಡಿದ ಟ್ರಂಪ್ ಹೇಳಿದರು.

ʼನಾವು ಈ ಯುದ್ಧವನ್ನು ಬಹಳ ಬೇಗನೆ ಗೆಲ್ಲಲಿದ್ದೇವೆ. ನಾವು ಗೆದ್ದ ತಕ್ಷಣ, ತೈಲ ಬೆಲೆಯು ಯುದ್ಧಕ್ಕಿಂತ ಮೊದಲು ಎಷ್ಟಿತ್ತೋ ಅಷ್ಟಕ್ಕೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಇರಾನ್ ಬಳಿ ಅಣ್ವಸ್ತ್ರ ಇರುವುದಿಲ್ಲ ಎಂಬುದೇ ಪ್ರಮುಖ ವಿಷಯವಾಗಲಿದೆ. ಮಿಲಿಟರಿ ಕಾರ್ಯಾಚರಣೆ ಮತ್ತು ಆರ್ಥಿಕ ನಿರ್ಬಂಧ ಈ ಎರಡೂ ರಂಗಗಳಲ್ಲಿ ಅಮೆರಿಕ ಯಶಸ್ವಿಯಾಗುತ್ತಿದೆ. ಅಮೆರಿಕದ ಒತ್ತಡದಿಂದಾಗಿ ಇರಾನ್ ಆರ್ಥಿಕತೆಯು ತೀವ್ರವಾಗಿ ಹಾನಿಗೊಳಗಾಗಿದೆ. ನಾವು ಖಂಡಿತವಾಗಿಯೂ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿದ್ದೇವೆ. ಅವರ ಹಣದ ಮೌಲ್ಯ ಸಂಪೂರ್ಣವಾಗಿ ಶೂನ್ಯವಾಗಿದೆ. ಅವರಲ್ಲಿ ಸುಮಾರು 300% ಹಣದುಬ್ಬರವಿದೆ. ಅಂದರೆ ಅವರ ಹಣ, ಆರ್ಥಿಕತೆ ಮತ್ತು ಮಿಲಿಟರಿ ಎಲ್ಲವೂ ನಾಶವಾಗಿದೆ. ಅವರು ತೀವ್ರ ಸಂಕಷ್ಟದಲ್ಲಿದ್ದಾರೆ' ಎಂದೂ ಟ್ರಂಪ್ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor