ಉಕ್ರೇನ್ ಕ್ಷಮೆಯಾಚನೆಗೆ ದಕ್ಷಿಣ ಕೊರಿಯಾ ಆಗ್ರಹ
Photo Credit : aljazeera.com
ಸಿಯೋಲ್: ಇಬ್ಬರು ಉತ್ತರ ಕೊರಿಯಾದ ಯುದ್ಧ ಕೈದಿಗಳನ್ನು ದಕ್ಷಿಣ ಕೊರಿಯಾಗೆ ಹಸ್ತಾಂತರಿಸಿದ ವಿಚಾರವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಅವರು ಸಾರ್ವಜನಿಕವಾಗಿ ಬಹಿರಂಗಪಡಿಸಿದ ನಂತರ, ದಕ್ಷಿಣ ಕೊರಿಯಾವು ಉಕ್ರೇನ್‍ನಿಂದ ಅಧಿಕೃತ ಕ್ಷಮೆಯಾಚನೆಗೆ ಆಗ್ರಹಿಸಿದೆ. ಈ ಹಸ್ತಾಂತರದ ಪ್ರಕ್ರಿಯೆಯನ್ನು ರಹಸ್ಯವಾಗಿಡಲು ಉದ್ದೇಶಿಸಲಾಗಿತ್ತು ಎಂದು ದಕ್ಷಿಣ ಕೊರಿಯಾ ಹೇಳಿದೆ.
2025ರ ಆರಂಭದಲ್ಲಿ ಉಕ್ರೇನ್-ರಶ್ಯ ಯುದ್ಧದ ಸಂದರ್ಭ ಬಂಧಿಸಲಾದ ಇಬ್ಬರು ವ್ಯಕ್ತಿಗಳನ್ನು ಇತ್ತೀಚೆಗೆ ದಕ್ಷಿಣ ಕೊರಿಯಾಗೆ ಕಳುಹಿಸಿಕೊಡಲಾಗಿದೆ ಎಂದು ಝೆಲೆನ್‍ಸ್ಕಿ ಕಳೆದ ವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದರು. ಈ ಘಟನೆಯು ದಕ್ಷಿಣ ಕೊರಿಯಾ ಮತ್ತು ಉಕ್ರೇನ್ ನಡುವೆ ರಾಜತಾಂತ್ರಿಕ ವಿವಾದಕ್ಕೆ ಕಾರಣವಾಗಿದೆ.
ಈ ಹಸ್ತಾಂತರದ ವಿಷಯವನ್ನು ರಹಸ್ಯವಾಗಿಡುವ ಒಪ್ಪಂದವನ್ನು ಉಕ್ರೇನ್ ಮುರಿದಿದೆ. ಆ ಇಬ್ಬರು ಯೋಧರು ಮತ್ತು ಉತ್ತರ ಕೊರಿಯಾದಲ್ಲಿರುವ ಅವರ ಸಂಬಂಧಿಕರ ಸುರಕ್ಷತೆಯ ಕಾಳಜಿ ಹಾಗೂ ವಿಶಾಲ ರಾಜತಾಂತ್ರಿಕ ಮತ್ತು ಭದ್ರತಾ ಕಾರಣಗಳಿಂದಾಗಿ ಈ ವಿಷಯವು ಸೂಕ್ಷ್ಮವಾಗಿತ್ತು ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಆರೋಪಿಸಿದ್ದಾರೆ. ಆದರೆ ಉಕ್ರೇನ್ ಅಂತಹ ಯಾವುದೇ ಒಪ್ಪಂದವನ್ನು ನಿರಾಕರಿಸಿದೆ.
ಉಕ್ರೇನ್‍ನಲ್ಲಿದ್ದಾಗ, ಆ ಇಬ್ಬರು ಉತ್ತರ ಕೊರಿಯಾದ ಯೋಧರು ಮಾಧ್ಯಮ ಸಂದರ್ಶನಗಳಲ್ಲಿ ತಾವು ದಕ್ಷಿಣ ಕೊರಿಯಾದಲ್ಲಿ ನೆಲೆಸಲು ಬಯಸುವುದಾಗಿ ಹೇಳಿದ್ದರು. ಅವರನ್ನು ಮರಳಿ ಉತ್ತರ ಕೊರಿಯಾಗೆ ಕಳುಹಿಸದಂತೆ ದಕ್ಷಿಣ ಕೊರಿಯಾವು ಉಕ್ರೇನ್ ಅನ್ನು ಒತ್ತಾಯಿಸಿತ್ತು,