ಶತ್ರು ಪಡೆಗಳನ್ನು ಶೀಘ್ರದಲ್ಲೇ ಅರೇಬಿಯನ್ ಸಮುದ್ರದಿಂದ ಓಡಿಸುತ್ತೇವೆ: ಮೊಜ್ತಬಾ ಖಾಮಿನೈ
ಮೊಜ್ತಬಾ ಖಾಮಿನೈ | Photo Credit : PTI
ಟೆಹರಾನ್: ಇರಾನ್ ಮಿಲಿಟರಿಯು ಶತ್ರುಗಳ ಪಡೆಯನ್ನು ದಕ್ಷಿಣ ಇರಾನ್‍ನ ಕರಾವಳಿಯಿಂದ ಅರೇಬಿಯನ್ ಸಮುದ್ರದವರೆಗೆ ಅಟ್ಟಿದೆ ಎಂದು ಇರಾನ್‍ನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಹೇಳಿದ್ದಾರೆ.
ನಮ್ಮ ಶೂರ ಯೋಧರು ಮತ್ತು ಹಾರ್ಮುಝ್ ಜಲಸಂಧಿಯ ರಕ್ಷಕರಿಂದ ಮಾರಣಾಂತಿಕ ಹೊಡೆತಗಳನ್ನು ತಿಂದ ನಂತರ, ಶತ್ರುಗಳು ಅರೇಬಿಯನ್ ಸಮುದ್ರದಿಂದ ಮುಂದೆ ಬರಲು ಧೈರ್ಯ ಮಾಡುತ್ತಿಲ್ಲ. ಅವರು ಯಾವಾಗಲೆಲ್ಲಾ ಅಂತಹ ಸಾಹಸಕ್ಕೆ ಕೈಹಾಕಿದ್ದಾರೋ, ಆಗಲೆಲ್ಲಾ ತಮಗೆ ತಾವೇ ಹಾನಿ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಅರೇಬಿಯನ್ ಸಮುದ್ರವೂ ಸಹ ಅವರ ಉಪಸ್ಥಿತಿಯಿಂದ ಮುಕ್ತವಾಗುವ ಸಮಯ ಹತ್ತಿರದಲ್ಲಿದೆ' ಎಂದು ಖಾಮಿನೈ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.