×
Ad

ಅಮೆರಿಕದಲ್ಲಿ ಲಘು ವಿಮಾನಗಳೆರಡು ಢಿಕ್ಕಿ: ಇಬ್ಬರು ಮೃತ್ಯು

Update: 2025-02-20 11:03 IST

Photo credit: X/@Terrence_STR

ಲಾಸ್ ಏಂಜಲೀಸ್: ಅಮೆರಿಕದ ಅರಿಝೋನಾದ ಮರಾನಾ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಎರಡು ಲಘು ವಿಮಾನಗಳು ಢಿಕ್ಕಿ ಹೊಡೆದು ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಎಸ್ ನ್ಯಾಶನಲ್ ಟ್ರಾನ್ಸ್ಪೋರ್ಟೇಶನ್ ಸೇಫ್ಟಿ ಬೋರ್ಡ್(NTSB) ಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಸೆಸ್ನಾ172S ಮತ್ತು ಲ್ಯಾನ್ ಕೈರ್ 360 ಎಂಕೆ II ಲಘು ವಿಮಾನಗಳ ನಡುವೆ ಢಿಕ್ಕಿ ಸಂಭವಿಸಿದೆ.

ಘಟನೆಯ ಬಗ್ಗೆ ಎನ್ ಟಿಎಸ್ ಬಿ ತನಿಖೆಯನ್ನು ನಡೆಸುತ್ತಿದೆ. ಮರಾನಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News