ಪಾಕಿಸ್ತಾನ | ಬಾಂಬ್ ಸ್ಫೋಟದಲ್ಲಿಇಬ್ಬರು ಸಾವು; 14 ಮಂದಿಗೆ ಗಾಯ
Update: 2025-08-07 20:35 IST
ಸಾಂದರ್ಭಿಕ ಚಿತ್ರ
ಪೇಷಾವರ: ಗುರುವಾರ ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ಪೊಲೀಸ್ ವಾಹನವನ್ನು ಗುರಿಯಾಗಿಸಿ ನಡೆಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಪೊಲೀಸ್ ಸಿಬ್ಬಂದಿ ಸಹಿತ ಇತರ 14 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ದಕ್ಷಿಣ ವಝೀರಿಸ್ತಾನ ಜಿಲ್ಲೆಯ ವಾನಾ ಪ್ರದೇಶದ ಟ್ಯಾಕ್ಸಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಪೊಲೀಸ್ ಗಸ್ತು ವಾಹನವನ್ನು ಗುರಿಯಾಗಿಸಿ ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ಸ್ಫೋಟಿಸಲಾಗಿದೆ. ಯಾವುದೇ ಗುಂಪು ಸ್ಫೋಟದ ಹೊಣೆ ವಹಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.