ಪಾಕಿಸ್ತಾನ: ರಾಜಕೀಯ ಸಮಾವೇಶದಲ್ಲಿ ಬಾಂಬ್ ಸ್ಫೋಟ; 35 ಮಂದಿ ಮೃತ್ಯು
Update: 2023-07-30 20:28 IST
Screengrab: Twitter/@Pak_AfgAffairs
ಪೇಶಾವರ: ರವಿವಾರ ವಾಯುವ್ಯ ಪಾಕಿಸ್ತಾನದಲ್ಲಿ ರಾಜಕೀಯ ಸಮಾವೇಶವೊಂದರಲ್ಲಿ ಬಾಂಬ್ ಸ್ಫೋಟಗೊಂಡು ಕನಿಷ್ಠ ಪಕ್ಷ 35 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನ ಗಡಿ ಬಳಿಯ ಖಾರ್ ಪಟ್ಟಣದಲ್ಲಿ ಡೇರೆ ಕೆಳಗೆ ನೆರೆದಿದ್ದ ಪಕ್ಷಯೊಂದರ 400ಕ್ಕೂ ಹೆಚ್ಚು ಮಂದಿ ಸದಸ್ಯರು ಹಾಗೂ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಈ ಬಾಂಬ್ ದಾಳಿ ನಡೆದಿದೆ.
ಬಾಂಬ್ ಸ್ಪೋಟಗೊಂಡ ಸ್ಥಳದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ದಾಳಿಯ ಸಂದರ್ಭದಲ್ಲಿ ದೇಹಗಳು ಛಿದ್ರಗೊಂಡಿರುವುದು ಮತ್ತು ಸ್ವಯಂಸೇವಕರು ರಕ್ತಸಿಕ್ತ ಸಂತ್ರಸ್ತರನ್ನು ಆ್ಯಂಬುಲೆನ್ಸ್ ಮೂಲಕ ರವಾನಿಸಲು ನೆರವು ನೀಡುತ್ತಿರುವುದನ್ನು ಕಾಣಬಹುದಾಗಿದೆ.
ಈ ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ ಎಂದು ವರದಿಯಾಗಿದೆ.