×
Ad

ಚೀನಾದಲ್ಲಿ ಬೆಂಕಿ ದುರಂತಕ್ಕೆ 39 ಮಂದಿ ಸಾವು; 9 ಮಂದಿಗೆ ಗಾಯ

Update: 2024-01-24 22:38 IST

Photo:NDTV

ಬೀಜಿಂಗ್ : ಪೂರ್ವ ಚೀನಾದ ಜಿಯಾಂಗ್ಕ್ಸಿ ಪ್ರಾಂತದ ಕ್ಸಿನ್ಯು ನಗರದಲ್ಲಿನ ಅಂಗಡಿಯೊಂದರಲ್ಲಿ ಬುಧವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಟ 39 ಮಂದಿ ಸಾವನ್ನಪ್ಪಿದ್ದು ಇತರ 9 ಮಂದಿ ಗಾಯಗೊಂಡಿದ್ದಾರೆ. ದುರಂತದ ಸ್ಥಳದಲ್ಲಿ ಇನ್ನೂ ಹಲವರು ಸಿಕ್ಕಿಬಿದ್ದಿರುವ ಸಾಧ್ಯತೆಯಿದೆ ಎಂದು ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ.

ಬೆಂಕಿ ದುರಂತ ಸಂಭವಿಸಿದ ಅಂಗಡಿಯಿರುವ ಕಟ್ಟಡದಲ್ಲಿ ಇಂಟರ್ನೆಟ್ ಕೇಂದ್ರಗಳು, ತರಬೇತಿ ಸಂಸ್ಥೆಗಳಿದ್ದು ಬೆಂಕಿ ಕಟ್ಟಡದ ಇತರ ಕಡೆ ಹರಡದಂತೆ ಅಗ್ನಿಶಾಮಕ ದಳ ಪ್ರಯತ್ನಿಸುತ್ತಿದೆ. ಬೆಂಕಿ ದುರಂತದ ಕಾರಣ ತಿಳಿದುಬಂದಿಲ್ಲ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News