×
Ad

ಅಮೆರಿಕದಲ್ಲಿ ಭೀಕರ ಕಾರು ಅಪಘಾತ: ಹೈದರಾಬಾದ್‌ ಮೂಲದ ಒಂದೇ ಕುಟುಂಬದ ನಾಲ್ವರು ಮೃತ್ಯು

Update: 2025-07-08 12:17 IST

Photo credit: NDTV

ಗ್ರೀನ್ ಕೌಂಟಿ (ಅಮೆರಿಕ): ಅಮೆರಿಕದ ಗ್ರೀನ್ ಕೌಂಟಿಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಹೈದರಾಬಾದ್ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ಮೃತರನ್ನು ಶ್ರೀವೆಂಕಟ್ (40), ಅವರ ಪತ್ನಿ ತೇಜಸ್ವಿನಿ (36) ಹಾಗೂ ದಂಪತಿಗಳ ಇಬ್ಬರು ಮಕ್ಕಳಾದ ಸಿದ್ಧಾರ್ಥ (9) ಹಾಗೂ ಮೃಂದಾ (7) ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದಾಗ ಇವರೆಲ್ಲ ಅಟ್ಲಾಂಟಾದಿಂದ ಡಲ್ಲಾಸ್‌ಗೆ ತೆರಳುತ್ತಿದ್ದರು ಎಂದು ಹೇಳಲಾಗಿದೆ. ತಪ್ಪು ದಿಕ್ಕಿನಲ್ಲಿ ಚಲಿಸುತ್ತಿದ್ದ ಮಿನಿ ಟ್ರಕ್ ಒಂದು ಕಾರಿಗೆ ಢಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಗೆ ಕಾರು ಹೊತ್ತಿ ಉರಿಯಿತು ಎಂದು ವರದಿಯಾಗಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಡೀ ಕುಟುಂಬ ಸುಟ್ಟು ಕರಕಲಾಗಿದೆ ಎಂದು ಪೊಲೀಸರು ಸಂತ್ರಸ್ತರ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತರ ಗುರುತುಗಳನ್ನು ದೃಢಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ  ನಡೆಸಿತು. ನಂತರ, ಅವರೆಲ್ಲರ ಪಾರ್ಥಿವ ಶರೀರಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News