×
Ad

ಕೈಯಲ್ಲಿದ್ದ ಮಾರ್ಕರ್ ಪೆನ್ ಅನ್ನು ಚೂರಿ ಎಂದು ತಪ್ಪಾಗಿ ಭಾವಿಸಿ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸ್

Update: 2023-08-19 22:54 IST

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ವ್ಯಕ್ತಿಯ ಕೈಯಲ್ಲಿದ್ದ ಮಾರ್ಕರ್ ಪೆನ್ ಅನ್ನು ಚೂರಿ ಎಂದು ತಪ್ಪಾಗಿ ಭಾವಿಸಿದ ಪೊಲೀಸ್ ಅಧಿಕಾರಿ ಆ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಅಮೆರಿಕದ ಕೊಲೊರಡೊ ರಾಜ್ಯದ ಡೆನ್ವರ್ ನಗರದಲ್ಲಿ ವರದಿಯಾಗಿದೆ.

ಬ್ರಾಂಡನ್ ಕೋಲೆ ಎಂಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಮಗನನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದಾನೆ ಎಂದು ಬ್ರಾಂಡನ್ನ ನೆರೆಮನೆಯವರು ನೀಡಿದ ದೂರಿನಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆಗ ಬ್ರಾಂಡನ್ ತಪ್ಪಿಸಿಕೊಳ್ಳಲು ಅಲ್ಲಿಂದ ಓಡಿದ್ದಾನೆ. ಆತನ ಕೈಯಲ್ಲಿದ್ದ ಮಾರ್ಕರ್ ಪೆನ್ ಅನ್ನು ಚೂರಿ ಎಂದು ತಪ್ಪು ತಿಳಿದ ಪೊಲೀಸರು ಆತನ ಬೆನ್ನಟ್ಟಿ ಚೂರಿ ಎಸೆಯುವಂತೆ ಎಚ್ಚರಿಸಿದ್ದಾರೆ. ಆದರೂ ಆತ ಓಡಿದಾಗ ಗುಂಡಿಕ್ಕಿದ್ದಾರೆ. ಕುಸಿದು ಬಿದ್ದ ಬ್ರಾಂಡನ್ನನ್ನು ಆಸ್ಪತ್ರೆಗೆ ದಾಖಲಿಸಿದಾಗ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News