×
Ad

ಅಂಗಡಿಯಲ್ಲಿ ಕಳವು ಆರೋಪ ; ನ್ಯೂಝಿಲ್ಯಾಂಡ್ ಸಂಸದೆ ರಾಜೀನಾಮೆ

Update: 2024-01-16 23:44 IST

Photograph: Lynn Grieveson/Getty Images

ವೆಲ್ಲಿಂಗ್ಟನ್ : ಬಟ್ಟೆಅಂಗಡಿಯಲ್ಲಿ ಕಳವು ಮಾಡಿದ ಆರೋಪ ಎದುರಿಸುತ್ತಿರುವ ನ್ಯೂಝಿಲ್ಯಾಂಡ್ ಸಂಸದೆ ಗೋಲ್ರಿಝ್ ಘಹ್ರಮನ್ ಮಂಗಳವಾರ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ವೈಯಕ್ತಿಕ ಒತ್ತಡ ಮತ್ತು ಆಘಾತದಿಂದ ಈ ಪ್ರಮಾದ ಸಂಭವಿಸಿರುವುದಾಗಿ ಹೇಳಿಕೆ ನೀಡಿದ್ದಾರೆ.

ನ್ಯೂಝಿಲ್ಯಾಂಡ್ ಸಂಸತ್‍ಗೆ ಚುನಾಯಿತರಾದ ಮೊದಲ ನಿರಾಶ್ರಿತೆ ಎಂಬ ದಾಖಲೆ ಬರೆದಿದ್ದ ಗ್ರೀನ್ ಪಾರ್ಟಿಯ ಗೋಲ್ರಿಝ್, ಕಳೆದ ವರ್ಷದ ಅಂತ್ಯದಲ್ಲಿ ಆಕ್ಲಂಡ್ ಹಾಗೂ ವೆಲ್ಲಿಂಗ್ಟನ್‍ನ ಆಧುನಿಕ ಬಟ್ಟೆಅಂಗಡಿಗಳಲ್ಲಿ ಡ್ರೆಸ್‍ಗಳನ್ನು ಕಳ್ಳತನ ಮಾಡಿದ ಆರೋಪದಲ್ಲಿ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾರೆ. ಸಂಸದೆಯಾಗಿ ಆಯ್ಕೆಗೊಳ್ಳುವ ಮುನ್ನ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮಾನಸಿಕ ಒತ್ತಡದಿಂದ ತಾನು ಮಾಡಿರುವ ಕಾರ್ಯ ರಾಜಕಾರಣಿಗಳ ಘನತೆಗೆ ಕುಂದು ಉಂಟು ಮಾಡುತ್ತದೆ. ಕೆಲಸ ಕಾರ್ಯದ ಒತ್ತಡದಿಂದ ಮಾಡಿರುವ ಈ ಕೃತ್ಯ ತನ್ನ ನಡತೆಗೆ ತಕ್ಕುದಾಗಿಲ್ಲ. ಇದು ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವಲ್ಲ ಎಂದು ರಾಜೀನಾಮೆ ಪತ್ರದಲ್ಲಿ ಗೋಲ್ರಿಝ್ ವಿವರಿಸಿದ್ದಾರೆ.

`ಫೆಲೆಸ್ತೀನ್ ಪರ ನಿಲುವು ಹೊಂದಿರುವ ಗೋಲ್ರಿಝ್ ನಿರಂತರ ಬೆದರಿಕೆ ಕರೆ ಎದುರಿಸುತ್ತಿದ್ದರು. ಇದು ಆಕೆಯ ಮಾನಸಿಕ ದೃಢತೆಯ ಮೇಲೆ ಪರಿಣಾಮ ಬೀರಿದೆ' ಎಂದು ಗ್ರೀನ್‍ಪಾರ್ಟಿಯ ಮುಖಂಡ ಜೇಮ್ಸ್ ಶಾ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News