ಅಮೆರಿಕ | ಟ್ರಂಪ್‍ಗೆ ತಿರುಗು ಬಾಣವಾದ ಸಿಬ್ಬಂದಿ ಕಡಿತ ಪ್ರಕ್ರಿಯೆ!
Update: 2025-09-24 21:37 IST
ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್, ಸೆ.24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆಯಂತೆ ಎಲಾನ್ ಮಸ್ಕ್ ಅವರ `ಸರಕಾರದ ದಕ್ಷತೆ ಇಲಾಖೆ(ಡಿಒಜಿಇ)' ಕೈಗೊಂಡಿದ್ದ ಸರಕಾರಿ ಸಿಬ್ಬಂದಿ ಕಡಿತ ಪ್ರಕ್ರಿಯೆ ಈಗ ಟ್ರಂಪ್‍ಗೆ ತಿರುಗು ಬಾಣವಾಗಿ ಪರಿಣಮಿಸಿದ್ದು ಸಿಬ್ಬಂದಿಗಳ ಕೊರತೆಯಿಂದ ಪ್ರಮುಖ ಸರಕಾರಿ ಇಲಾಖೆಗಳ ಕಾರ್ಯಕ್ಕೆ ತೊಡಕಾಗಿದೆ ಎಂದು ವರದಿಯಾಗಿದೆ.
ಸಾಮಾನ್ಯ ಸೇವೆಗಳ ಆಡಳಿತವು ಸಿಬ್ಬಂದಿಗಳ ಕೊರತೆಯ ಬಗ್ಗೆ ವರದಿ ಸಲ್ಲಿಸಿದ ಬಳಿಕ ಮರಳಿ ಕೆಲಸಕ್ಕೆ ಸೇರುವಂತೆ ವಜಾಗೊಂಡಿರುವ ಸಿಬ್ಬಂದಿಗಳಿಗೆ ಟ್ರಂಪ್ ಆಡಳಿತ ತಿಳಿಸಿದೆ. ಇದಕ್ಕೆ ಒಪ್ಪುವವರು ಅಕ್ಟೋಬರ್ 6ರ ಒಳಗೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಪತ್ರದಲ್ಲಿ ಸೂಚಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.