America | ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ರನ್ನು ವಜಾಗೊಳಿಸಿದ ಟ್ರಂಪ್
Update: 2026-03-06 19:37 IST
ಕ್ರಿಸ್ಟಿ ನೋಯೆಮ್ | Photo Credit : aljazeera.com
ವಾಷಿಂಗ್ಟನ್, ಮಾ.6: ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್‍ರನ್ನು ಹುದ್ದೆಯಿಂದ ತೆರವುಗೊಳಿಸಿ ಆ ಸ್ಥಾನಕ್ಕೆ ರಿಪಬ್ಲಿಕನ್ ಸೆನೆಟರ್ ಮಾರ್ಕ್‍ವೆಯ್ನ್ ಮುಲಿನ್‍ರನ್ನು ನೇಮಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಪಶ್ಚಿಮ ಗೋಳಾರ್ಧದ ಮೇಲೆ ಕೇಂದ್ರೀಕೃತವಾಗಿರುವ ಹೊಸ ಭದ್ರತಾ ಉಪಕ್ರಮಕ್ಕಾಗಿ ವಿಶೇಷ ಪ್ರತಿನಿಧಿಯಾಗಿ ನೋಯೆಮ್ ಅವರನ್ನು ಮರು ನಿಯೋಜಿಸುವುದಾಗಿ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬದಲಾವಣೆ ಮಾರ್ಚ್ 31ರಿಂದ ಅನ್ವಯಿಸಲಿದೆ ಎಂದವರು ಹೇಳಿದ್ದಾರೆ.