×
Ad

ಮಧ್ಯಪ್ರಾಚ್ಯದಲ್ಲಿ ಸಂಘರ್ಷ | ನಮ್ಮ ಮೇಲಲ್ಲ, ಅಮೆರಿಕದ ಮೇಲೆ ಒತ್ತಡ ಹಾಕಿ: ಮಧ್ಯವರ್ತಿಗಳಿಗೆ ಇರಾನ್ ಸಲಹೆ

Update: 2026-03-06 19:42 IST

Photo Credit : PTI

ಟೆಹ್ರಾನ್, ಮಾ.6: ಮಧ್ಯಪ್ರಾಚ್ಯ ಸಂಘರ್ಷವನ್ನು ಕೊನೆಗೊಳಿಸಲು ನಡೆಯುತ್ತಿರುವ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಪ್ರಯತ್ನಗಳು ಇರಾನ್ ಅನ್ನು ಅಲ್ಲ, ಅಮೆರಿಕ ಮತ್ತು ಇಸ್ರೇಲನ್ನು ಕೇಂದ್ರೀಕರಿಸಬೇಕು ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಶುಕ್ರವಾರ ಹೇಳಿದ್ದಾರೆ.

ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಬಯಸುವ ಯಾವುದೇ ರಾಷ್ಟ್ರವೂ ಸಂಘರ್ಷ ಪ್ರಾರಂಭಿಸಿದವರ ಮೇಲೆ ಒತ್ತಡ ಹಾಕಬೇಕು. ಇರಾನ್‍ನ ಮೇಲೆ ಅಲ್ಲ. ಈ ಪ್ರದೇಶದಲ್ಲಿ ಶಾಶ್ವತ ಶಾಂತಿಗೆ ನಾವು ಬದ್ಧರಾಗಿದ್ದೇವೆ, ಆದರೆ ನಮ್ಮ ದೇಶದ ಘನತೆ ಮತ್ತು ಅಧಿಕಾರವನ್ನು ರಕ್ಷಿಸಲು ನಮಗೆ ಯಾವುದೇ ಹಿಂಜರಿಕೆಯಿಲ್ಲ. ಇರಾನ್ ಜನರನ್ನು ಕೀಳಂದಾಜಿಸುವ ಮೂಲಕ ಬೆಂಕಿಯನ್ನು ಹುಟ್ಟುಹಾಕಿದವರು ಮಧ್ಯಸ್ಥಿಕೆಯ ಗುರಿಯಾಗಬೇಕು' ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News