×
Ad

ಅನ್ಯಗೃಹ ಜೀವಿಗಳ ಕುರಿತ ಮಾಹಿತಿ ಅಮೆರಿಕದ ಬಳಿಯಿದೆ: ಮಾಜಿ ಗುಪ್ತಚರ ಅಧಿಕಾರಿ ಹೇಳಿಕೆ

Update: 2023-07-27 23:17 IST

ವಾಷಿಂಗ್ಟನ್, ಜು.27: ಅನ್ಯಗೃಹ ಜೀವಿಗಳ ಕುರಿತಾದ ಮಾಹಿತಿಯನ್ನು ಅಮೆರಿಕ ಸರಕಾರ ಸಾರ್ವಜನಿಕರಿಂದ ಮಾತ್ರವಲ್ಲದೆ ಸಂಸತ್‍ನಿಂದಲೂ ಮರೆಮಾಚುತ್ತಿದೆ ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿ ಡೇವಿಡ್ ಗ್ರಷ್ ಹೇಳಿದ್ದಾರೆ.

ಬುಧವಾರ ಸದನ ಮೇಲ್ವಿಚಾರಣಾ ಸಮಿತಿಯ ಎದುರು ಹೇಳಿಕೆ ನೀಡಿದ ಅವರು, ಅಮೆರಿಕ ಸರಕಾರದ ಬಳಿ ಅನ್ಯಗೃಹ ಜೀವಿಗಳ ನೌಕೆಯೂ ಇದೆ. ಅನ್ಯಗೃಹ ಜೀವಿಗಳ ಬಗ್ಗೆ ಹೆಚ್ಚು ಮಾಹಿತಿ ಇರುವವರಿಂದ ತನಗೆ ಈ ವಿಷಯ ತಿಳಿದಿದೆ. ಈ ಕುರಿತ ಫೋಟೋಗಳು ಮತ್ತಿತರ ದಾಖಲೆಗಳನ್ನೂ ಅವರು ಒದಗಿಸಿದ್ದಾರೆ ಎಂದು ಡೇವಿಡ್ ಗ್ರಷ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News