ಅಮೆರಿಕ | ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ನಿಗೂಢ ಸಾವು
Update: 2024-09-21 21:51 IST
PC : X/@IndianEmbassyUS
ವಾಷಿಂಗ್ಟನ್ : ವಾಷಿಂಗ್ಟನ್ನಲಲ್ಲಿ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಯೊಬ್ಬರು ಕಚೇರಿಯ ಆವರಣದಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಸೆಪ್ಟಂಬರ್ 18ರಂದು ಘಟನೆ ಸಂಭವಿಸಿದ್ದು ಸ್ಥಳೀಯ ಪೊಲೀಸರು ಮತ್ತು ರಹಸ್ಯ ಸೇವಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಯ ಸಾಧ್ಯತೆ ಸೇರಿದಂತೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುವುದು. ಪಾರ್ಥಿವ ಶರೀರವನ್ನು ಭಾರತಕ್ಕೆ ತ್ವರಿತವಾಗಿ ವರ್ಗಾಯಿಸುವ ನಿಟ್ಟಿನಲ್ಲಿ ಸಂಬಂಧಿತ ಏಜೆನ್ಸಿಗಳು ಹಾಗೂ ಕುಟುಂಬದ ಸದಸ್ಯರ ಜತೆ ಸಂಪರ್ಕದಲ್ಲಿದ್ದೇವೆ. ಕುಟುಂಬದ ಗೌಪ್ಯತೆಯ ಕಾಳಜಿಯಿಂದ ಮೃತರ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಡುಗಡೆಗೊಳಿಸಿಲ್ಲ. ಮೃತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವನ್ನೂ ಒದಗಿಸಲಾಗುವುದು' ಎಂದು ಭಾರತೀಯ ರಾಯಭಾರಿ ಕಚೇರಿ ಹೇಳಿದೆ.