ಭಾರತಕ್ಕೆ ಹಸ್ತಾಂತರ ಕುರಿತು ಪ್ರಶ್ನಿಸಲು ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್‍ಗೆ ಅವಕಾಶ
Update: 2024-03-15 23:14 IST
Photo : NDTV
ಲಂಡನ್: ಭಾರತದಲ್ಲಿ `ವಾಂಟೆಡ್' ಪಟ್ಟಿಯಲ್ಲಿರುವ ಬ್ರಿಟನ್ ಮೂಲದ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಲಂಡನ್ ಹೈಕೋರ್ಟ್ ಅನುಮತಿ ನೀಡಿದೆ.
ಭಾರತದಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಭಂಡಾರಿಯನ್ನು ಹಸ್ತಾಂತರಿಸುವಂತೆ ಕೋರಿ ಭಾರತ ಸಲ್ಲಿಸಿದ್ದ ಅರ್ಜಿಯನ್ನು 2022ರ ನವೆಂಬರ್ ಲ್ಲಿ ವೆಸ್ಟ್‍ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಪುರಸ್ಕರಿಸಿದ್ದು ಭಾರತಕ್ಕೆ ಹಸ್ತಾಂತರಿಸುವಂತೆ ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಭಂಡಾರಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಮೇಲ್ಮನವಿ ಸಲ್ಲಿಸಲು ಅವಕಾಶ ದೊರಕಿದ್ದು ಈ ಕುರಿತ ಅರ್ಜಿಯ ವಿಚಾರಣೆ ಈ ವರ್ಷಾಂತ್ಯಕ್ಕೆ ನಡೆಯಬಹುದು ಎಂದು ಭಂಡಾರಿಯ ಕಾನೂನು ಸಲಹೆಗಾರರ ತಂಡ ಮಾಹಿತಿ ನೀಡಿದೆ.