ಪುಟಿನ್ ಅಧಿಕೃತ ಕಾರು ಸ್ಫೋಟ!; ರಷ್ಯಾ ಅಧ್ಯಕ್ಷರ ಹತ್ಯೆಗೆ ಯತ್ನ?
Update: 2025-03-30 12:52 IST
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (PTI)
ಮಾಸ್ಕೋ : ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಅಧಿಕೃತ ಕಾರು ʼಔರಸ್ ಸೆನಾಟ್ ಲಿಮೋಸಿನ್ʼ ಸ್ಫೋಟಗೊಂಡು ಬೆಂಕಿಗಾಹುತಿಯಾಗಿದೆ. ಇದು ಪುಟಿನ್ ಹತ್ಯೆ ಯತ್ನವೇ ಎಂಬ ಸಂಶಯ ಮೂಡಿದೆ.
ಮಾರ್ಚ್ 29ರಂದು ಲುಬಿಯಾಂಕದಲ್ಲಿರುವ ಮಾಸ್ಕೋದ FSB ರಹಸ್ಯ ಸೇವೆಯ ಪ್ರಧಾನ ಕಚೇರಿ ಬಳಿ ಘಟನೆ ನಡೆದಿದೆ. ಕಾರು ಹಠಾತ್ ಸ್ಪೋಟಗೊಳ್ಳಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಸಾವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಷ್ಯಾ ಅಧ್ಯಕ್ಷರ ಹತ್ಯೆ ಯತ್ನದ ಕುರಿತು ವದಂತಿಗೆ ಕಾರಣವಾಗಿದೆ.