×
Ad

ಆಸ್ಟ್ರೇಲಿಯಾ | ಐವಿಎಫ್ ಮೂಲಕ ಕಾಂಗರೂ ಭ್ರೂಣ ರಚನೆ!

Update: 2025-02-07 22:10 IST

Image credits: University of Queensland

ಸಿಡ್ನಿ: ಆಸ್ಟ್ರೇಲಿಯಾದ ವಿಜ್ಞಾನಿಗಳು `ಇನ್‍ವಿಟ್ರೋ ಫರ್ಟಿಲೈಸೇಷನ್(ಐವಿಎಫ್) ಮೂಲಕ ಜಗತ್ತಿನ ಪ್ರಥಮ ಕಾಂಗರೂ ಭ್ರೂಣವನ್ನು ಯಶಸ್ವಿಯಾಗಿ ಉತ್ಪಾದಿಸಿದ್ದು ಇದು ಅಪಾಯದ ಅಂಚಿನಲ್ಲಿರುವ ಪ್ರಭೇದಗಳ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಬಹುದು ಎಂದು ಮಾಧ್ಯಮದ ವರದಿ ಹೇಳಿದೆ.

`ರಿಪ್ರೊಡಕ್ಟಿವ್, ಫರ್ಟಿಲಿಟಿ ಆ್ಯಂಡ್ ಡೆವಲಪ್‍ಮೆಂಟ್' ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಆಸ್ಟ್ರೇಲಿಯಾದ ಕ್ವೀನ್ಸ್‍ಲ್ಯಾಂಡ್ ವಿವಿಯ ಸಂಶೋಧಕರ ನೇತೃತ್ವದ ಸಂಶೋಧನಾ ತಂಡವು ಸ್ಥಳೀಯ ಅಪರೂಪದ ಪ್ರಾಣಿ ಕಾಂಗರೂವಿನ ಸಂರಕ್ಷಣೆಗಾಗಿ ಐವಿಎಫ್ ನೆರವಿನ ಸಂತಾನೋತ್ಪತ್ತಿಯ ಸಾಧ್ಯತೆಯನ್ನು ದಾಖಲೆ ಸಹಿತ ವಿವರಿಸಲಾಗಿದೆ.

`ಹೊಟ್ಟೆಯಲ್ಲಿ ಚೀಲವನ್ನು ಹೊಂದಿರುವ ಪ್ರಭೇದಗಳಾದ ಕೋಲಾಗಳು, ತಾಸ್ಮೇನಿಯನ್ ಡೆವಿಲ್, ಕೂದಲುಳ್ಳ ಮೂಗನ್ನು ಹೊಂದಿರುವ ವೊಂಬಾಟ್(ಆಸ್ಟ್ರೇಲಿಯಾದಲ್ಲಿ ಕಂಡುಬರುವ ಕರಡಿಯನ್ನು ಹೋಲುವ ಸಣ್ಣ ಪ್ರಾಣಿ) ಇತ್ಯಾದಿಗಳ ಸಂರಕ್ಷಣೆಯನ್ನು ಬೆಂಬಲಿಸುವುದು ನಮ್ಮ ಅಂತಿಮ ಗುರಿಯಾಗಿದೆ' ಎಂದು ಕ್ವೀನ್ಸ್‍ಲ್ಯಾಂಡ್ ವಿವಿಯ ಹಿರಿಯ ಉಪನ್ಯಾಸಕ ಮತ್ತು ಮುಖ್ಯ ಸಂಶೋಧಕ ಆಂಡ್ರೆಸ್ ಗ್ಯಾಂಬಿನಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News