×
Ad

ಬಾಂಗ್ಲಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷ ಜೈಲುಶಿಕ್ಷೆ

Update: 2026-02-02 23:03 IST

 ಶೇಖ್ ಹಸೀನಾ | Photo Credit : PTI 

ಢಾಕ: ಸರ್ಕಾರಿ ವಸತಿ ಯೋಜನೆಯಲ್ಲಿ ಭೂಮಿ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಬಾಂಗ್ಲಾದೇಶದ ನ್ಯಾಯಾಲಯ ಸೋಮವಾರ 10 ವರ್ಷ ಜೈಲುಶಿಕ್ಷೆ ವಿಧಿಸಿದೆ.

ಶೇಖ್ ಹಸೀನಾಗೆ ಪ್ರತೀ ಪ್ರಕರಣಗಳಲ್ಲಿ ಐದು ವರ್ಷದಂತೆ ಒಟ್ಟು 10 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಬಿಎಸ್‍ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇದೇ ಪ್ರಕರಣಗಳಲ್ಲಿ ಹಸೀನಾ ಅವರ ಸೋದರಳಿಯ ರದ್ವಾನ್ ಮುಜಿಬ್ ಸಿದ್ದಿಕ್, ಸೋದರ ಸೊಸೆ ಅಜ್ಮಿನಾ ಸಿದ್ದಿಕ್‍ಗೆ ಒಟ್ಟು 7 ವರ್ಷ ಜೈಲುಶಿಕ್ಷೆ, ಸೋದರ ಸೊಸೆ, ಬ್ರಿಟನ್ ಸಂಸದೆ ಟುಲಿಪ್ ಸಿದ್ದಿಕ್‍ಗೆ ಒಟ್ಟು 4 ವರ್ಷ ಜೈಲು ಶಿಕ್ಷೆ ವಿಧಿಸಿ ಢಾಕಾದ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಬಾಂಗ್ಲಾದೇಶದಲ್ಲಿ ಪ್ರತಿಭಟನೆ ವ್ಯಾಪಕಗೊಳ್ಳುತ್ತಿದ್ದಂತೆಯೇ ಕಳೆದ ವರ್ಷದ ಆಗಸ್ಟ್ 5ರಂದು ಭಾರತಕ್ಕೆ ಪಲಾಯನ ಮಾಡಿದ್ದ ಹಸೀನಾರನ್ನು ʼದೇಶಭ್ರಷ್ಟೆ' ಎಂದು ಈ ಹಿಂದೆ ನ್ಯಾಯಾಲಯ ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News