×
Ad

ಭಾರತೀಯ ಮೂಲದ ಪರಿಸರ ವಿಜ್ಞಾನಿ ರಾಮನಾಥನ್‍ಗೆ ಕ್ರಾಫರ್ಡ್ ಪ್ರಶಸ್ತಿ

Update: 2026-02-02 22:53 IST

 ವೀರಭದ್ರನ್ ರಾಮನಾಥನ್ | Photo Credit : NDTV  

ವಾಷಿಂಗ್ಟನ್: ಭಾರತೀಯ ಮೂಲದ ಹವಾಮಾನ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್‍ನಿಂದ ಭೂವಿಜ್ಞಾನದಲ್ಲಿ 2026ರ ಕ್ರಾಫರ್ಡ್ ಪ್ರಶಸ್ತಿಯನ್ನು ನೀಡಲಾಗಿದೆ.

ಭೂವಿಜ್ಞಾನದ ನೊಬೆಲ್ ಎಂದು ಗುರುತಿಸಲಾಗುವ ಕ್ರಾಫರ್ಡ್ ಪ್ರಶಸ್ತಿಯು ರಾಮನಾಥನ್ ಅವರು ಎರಡು ದಶಕಗಳಿಂದ ಜಾಗತಿಕ ತಾಪಮಾನ ಏರಿಕೆ, ಕಂದು ಮೋಡಗಳ ಬಗ್ಗೆ ನಡೆಸಿದ ಸಂಶೋಧನೆಯನ್ನು ಗುರುತಿಸಿದೆ. 82 ವರ್ಷದ ರಾಮನಾಥನ್ ಮದುರೈಯಲ್ಲಿ ಜನಿಸಿದ್ದು ಅಣ್ಣಾಮಲೈ ವಿವಿ ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನಲ್ಲಿ ಪದವಿ ಪಡೆದಿದ್ದಾರೆ. ಪ್ರಸ್ತುತ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಗೌರವ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News