ಬಾಂಗ್ಲಾದ ಕರೆನ್ಸಿ ನೋಟ್‍ಗಳಲ್ಲಿ ಸ್ಥಾಪಕ ಅಧ್ಯಕ್ಷ ರಹ್ಮಾನ್ ಭಾವಚಿತ್ರ ತೆರವು
Update: 2025-06-01 22:44 IST
Photo Credit: AFP
ಢಾಕ: ಬಾಂಗ್ಲಾದೇಶವು ರವಿವಾರ ಹೊಸ ಬ್ಯಾಂಕ್‍ನೋಟ್‍ಗಳನ್ನು ಜಾರಿಗೊಳಿಸಿದ್ದು ಉಚ್ಛಾಟಿತ ಪ್ರಧಾನಿ ಶೇಖ್ ಹಸೀನಾ ಅವರ ತಂದೆ, ಬಾಂಗ್ಲಾದ ಸ್ಥಾಪಕ ಅಧ್ಯಕ್ಷ ಶೇಖ್ ಮುಜಿಬುರ್ ರಹ್ಮಾನ್ ಅವರ ಭಾವಚಿತ್ರವನ್ನು ನೋಟ್‍ಗಳಿಂದ ತೆರವುಗೊಳಿಸಿದೆ.
ಹೊಸ ಸರಣಿ ಮತ್ತು ವಿನ್ಯಾಸದಡಿ ಹೊಸ ನೋಟ್ ಗಳು ಯಾವುದೇ ಮಾನವ ಭಾವಚಿತ್ರಗಳನ್ನು ಒಳಗೊಂಡಿರುವುದಿಲ್ಲ. ಆದರೆ ನೈಸರ್ಗಿಕ ಭೂದೃಶ್ಯಗಳು ಮತ್ತು ಸಾಂಪ್ರದಾಯಿಕ ಹೆಗ್ಗುರುತುಗಳನ್ನು ಪ್ರದರ್ಶಿಸುತ್ತವೆ ಎಂದು ಬಾಂಗ್ಲಾದೇಶ್ ಬ್ಯಾಂಕ್ ನ ವಕ್ತಾರ ಆರಿಫ್ ಹುಸೇನ್ ಖಾನ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.