×
Ad

ಬಾಂಗ್ಲಾದೇಶ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕ್ರಿಕೆಟಿಗ ಶಕೀಬ್ ಅಲ್ ಹಸನ್

Update: 2024-01-08 15:18 IST

ಶಕೀಬ್ ಅಲ್ ಹಸನ್ (Photo:X)

ಢಾಕಾ: ವಿರೋಧ ಪಕ್ಷಗಳು ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ ಆಡಳಿತಾರೂಢ ಅವಾಮಿ ಲೀಗ್ ಭಾರಿ ಜಯಭೇರಿ ಬಾರಿಸಿದ್ದು, ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಕೂಡಾ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮಗುರಾದ ಪಶ್ಚಿಮ ಪಟ್ಟಣದಿಂದ ಸ್ಪರ್ಧಿಸಿದ್ದ ಶಕೀಬ್ ಅಲ್ ಹಸನ್, ತಮ್ಮ ಪ್ರತಿಸ್ಪರ್ಧಿಯನ್ನು 1.50 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ ಎಂದು ಜಿಲ್ಲಾ ಮುಖ್ಯ ಆಡಳಿತಗಾರ ಅಬು ನಾಸೆರ್ ಬೇಗ್ ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಪ್ರಮುಖ ವಿರೋಧ ಪಕ್ಷವಾಗಿದ್ದ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ(ಬಿಎನ್ಪಿ)ವು ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ, ಆಡಳಿತಾರೂಢ ಅವಾಮಿ ಲೀಗ್ ನೇತೃತ್ವದ ಮೈತ್ರಿ ಕೂಟವು ಸತತ ಐದನೆಯ ಬಾರಿ ಭಾರಿ ಜಯಭೇರಿ ಬಾರಿಸಿದೆ.

ಚುನಾವಣೆಗೂ ಮುನ್ನ ಮಾತನಾಡಿದ್ದ ಶಕೀಬ್ ಅಲ್ ಹಸನ್, ನಾನು ಚುನಾವಣೆಯಲ್ಲಿ ಗಂಭೀರವಾದ ಅಡ್ಡಿಯನ್ನೇನೂ ಎದುರಿಸುತ್ತಿಲ್ಲವಾದರೂ, ನನ್ನ ಸ್ಪರ್ಧೆಯ ಬಗ್ಗೆ ನಾನು ರೋಮಾಂಚಿತಗೊಂಡಿದ್ದೇನೆ ಎಂದು ಹೇಳಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಶ‍್ರೇಯಾಂಕದಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಗಳಲ್ಲಿ ಮೊದಲ ಶ್ರೇಯಾಂಕ ಗಳಿಸಿದ್ದ ಏಕೈಕ ಆಟಗಾರ ಶಕೀಬ್ ಅಲ್ ಹಸನ್ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News