ಬಾಂಗ್ಲಾ: ಹಸೀನಾ ವಿರುದ್ಧ ಔಪಚಾರಿಕ ಆರೋಪ ದಾಖಲು
Update: 2025-06-01 20:44 IST
ಶೇಖ್ ಹಸೀನಾ (Photo: PTI)
ಢಾಕ: ಬಾಂಗ್ಲಾದೇಶದ ಪ್ರಾಸಿಕ್ಯೂಟರ್‍ಗಳು ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಮಾನವೀಯತೆಯ ವಿರುದ್ಧದ ಅಪರಾಧ ಆರೋಪವನ್ನು ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಲ್ಲಿ ಔಪಚಾರಿಕವಾಗಿ ದಾಖಲಿಸಿದ್ದು ವಿಚಾರಣೆ ರವಿವಾರ ಆರಂಭಗೊಂಡಿದೆ ಎಂದು `ಢಾಕಾ ಟ್ರಿಬ್ಯೂನ್' ವರದಿ ಮಾಡಿದೆ.
ಹಸೀನಾ ಅವರಲ್ಲದೆ, ದೇಶದ ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಲ್ ಮತ್ತು ಮಾಜಿ ಐಜಿಪಿ ಚೌಧರಿ ಮಾಮುನ್ ಅವರನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದೆ. ಇದೇ ಪ್ರಥಮ ಬಾರಿಗೆ, ನ್ಯಾಯಮಂಡಳಿಯ ಕಲಾಪವನ್ನು ಪ್ರಸಾರ ಮಾಡಲು ಸರ್ಕಾರಿ ಸ್ವಾಮ್ಯದ ಬಿಟಿವಿಗೆ ಅವಕಾಶ ನೀಡಲಾಗಿದೆ.