×
Ad

ಶೇಖ್ ಹಸೀನಾ ಬಂಧನಕ್ಕೆ ಇಂಟರ್ಪೋಲ್ ರೆಡ್ ನೋಟಿಸ್: ಬಾಂಗ್ಲಾದೇಶ ಮನವಿ

Update: 2025-04-20 23:19 IST

ಶೇಖ್ ಹಸೀನಾ (Photo:PTI)

ಢಾಕ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ 12 ವ್ಯಕ್ತಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಬಾಂಗ್ಲಾದೇಶ ಪೊಲೀಸ್ ಇಲಾಖೆಯ ನ್ಯಾಷನಲ್ ಸೆಂಟ್ರಲ್ ಬ್ಯೂರೊ(ಎನ್ಸಿಬಿ) ಕೋರಿಕೆ ಸಲ್ಲಿಸಿರುವುದಾಗಿ `ದಿ ಡೈಲಿ ಸ್ಟಾರ್' ರವಿವಾರ ವರದಿ ಮಾಡಿದೆ.

ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರವನ್ನು ಪದಚ್ಯುತಗೊಳಿಸಲು ಪಿತೂರಿ ನಡೆಯುತ್ತಿದೆ ಎಂಬ ವರದಿಗಳ ನಡುವೆಯೇ ಈ ಕೋರಿಕೆಯನ್ನು ಸಲ್ಲಿಸಲಾಗಿದೆ. ಕಳೆದ ವರ್ಷ ಬಾಂಗ್ಲಾದಲ್ಲಿ ನಡೆದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯು ಅವಾಮಿ ಲೀಗ್ ನೇತೃತ್ವದ 16 ವರ್ಷದ ಆಡಳಿತವನ್ನು ಕಿತ್ತೊಗೆದಿದ್ದು ಆಗ ಪ್ರಧಾನಿಯಾಗಿದ್ದ 77 ವರ್ಷದ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದು ಆಗಸ್ಟ್ 5ರಿಂದ ಭಾರತದಲ್ಲಿ ನೆಲೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News